30-11-2023
ಬೀದರ್: ಅಕಾಲಿಕ ಮಳೆಗೆ ತೊಗರಿ, ಜೋಳ ನೆಲಸಮ
Author: ಗಣಪತಿ ಶರ್ಮ
ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ನೆಲಕ್ಕುರುಳಿದ ತೊಗರಿ, ಜೋಳ: ಅಸಹಾಯಕನಾದ ಬೀದರ್ನ ಅನ್ನದಾತರು.
ಈ ವರ್ಷ ಬೀದರ್ ಜಿಲ್ಲೆಯಲ್ಲಿ 1 ಲಕ್ಷ 18 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೊಗರಿಯನ್ನ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಮಳೆ ಕೂಡಾ ಉತ್ತಮವಾಗಿ ಸುರಿದಿತ್ತು.
ಆದರೆ ತೊಗರಿ ಕಾಯಿ ಹಾಗೂ ಹೂವುಕಟ್ಟವ ಹೊತ್ತನಲ್ಲಿ ಮಳೆ ಕೈಕೊಟ್ಟ ಪರಿಣಾಮವಾಗಿ ತೊಗರಿ ಹೂವುಗಳೆಲ್ಲ ಉದುರಿ ಹೋಗಿವೆ.
ಸುಮಾರು 70 ಸಾವಿರಕ್ಕೂ ಅಧಿಕ ತೊಗರಿ ಬೆಳೆ ಹೂವು ಬಿಡುವ ಹಂತದಲ್ಲಿಯೇ ನಾಶವಾಯಿತು.
ಅತಿವೃಷ್ಟಿಯಿಂದಾಗಿ ಉದ್ದು, ಸೋಯಾ, ಹೆಸರು ಈ ವರ್ಷ ನೆಲಕಚ್ಚಿದೆ. ತೊಗರಿಯಲ್ಲಾದರೂ ಲಾಭ ಮಾಡಿಕೊಳ್ಳಬೇಕು ಅಂದಕೊಂಡಿದ್ದ ರೈತರಿಗೆ ಇದು ಶಾಕ್ ಕೊಟ್ಟಿದೆ.
ಈ ವರ್ಷದ ಹಿಂಗಾರು ಬೆಳೆಯಾದ ಜೋಳವನ್ನ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು.
ಆದರೆ ಏಕಾಏಕಿ ಸುರಿದ ಮಳೆಯಿಂದ ಜೋಳ ಸಂಪೂರ್ಣವಾಗಿ ನೆಲಕ್ಕೆ ಬಿದ್ದಿದೆ. ನೆಲಕ್ಕೆ ಬಿದ್ದರಿರುವ ಜೋಳವನ್ನ ಮೆಲ್ಲಕ್ಕೆತ್ತಿ ರೈತರು ಕಷ್ಟಪಟ್ಟು ಕಟ್ಟುತ್ತಿದ್ದಾರೆ.
ಸ್ವಲ್ಪ ಗಾಳಿ ಬಿಸಿದರೆ, ಮತ್ತೆ ಜೋಳ ನೆಲಕ್ಕೆ ಉರುಳಿದರೆ ಜೋಳ ಮುರಿದು ಹೋಗುತ್ತದೆ ಎಂಬ ಆತಂಕವೂ ರೈತರನ್ನ ಕಾಡುತ್ತಿದೆ.
NEXT -
ಮೈಸೂರಿನಲ್ಲಿ ಮುಂದುವರಿದ ಹುಲಿ ಹುಡುಕಾಟ