29-11-2023

ಮೈಸೂರಿನಲ್ಲಿ ಮುಂದುವರಿದ ಹುಲಿ ಹುಡುಕಾಟ

Author: ಗಣಪತಿ ಶರ್ಮ

ಮೈಸೂರು ಜಿಲ್ಲೆಯ ನಂಜನಗೂಡು ಭಾಗದ ಜನರ ನಿದ್ದೆಗೆಡಿಸಿದ್ದ ಹುಲಿಯನ್ನು ಮಂಗಳವಾರ ಸೆರೆ ಹಿಡಿಯಲಾಗಿತ್ತು. 

ಇದೀಗ ಇನ್ನೊಂದು ಹುಲಿಯ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.

ಮೈಸೂರು ತಾಲ್ಲೂಕಿನ ಗ್ರಾಮಗಳಲ್ಲಿ ಹುಲಿ ಓಡಾಟ ಹಿನ್ನೆಲೆ: ಹುಲಿ ಹುಡಕಾಟದ ಕಾರ್ಯಾಚರಣೆ ಆರಂಭ

ಹುಲಿ ಸೆರೆ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿ

ಥರ್ಮಲ್ ಸೆನ್ಸರ್ ಕ್ಯಾಮೆರಾ, 30 ಜಿಎಸ್‌ಎಮ್ ಕ್ಯಾಮೆರಾ, 03 ಪಿಟಿಜೆಡ್ ಕ್ಯಾಮೆರಾ 02, ಹುಲಿ ಸೆರೆಗಾಗಿ ಮೂರು ಬೋನುಗಳ ವ್ಯವಸ್ಥೆ

ಡ್ರೋನ್ ಕ್ಯಾಮೆರಾ ಬಳಸಿಕೊಂಡು ಹುಲಿ ಚಲನ ವಲನ ಪತ್ತೆಗೆ ಕ್ರಮ ಕೈಗೊಂಡಿರುವ ಅರಣ್ಯಾಧಿಕಾರಿಗಳು

ಮೈಸೂರು ತಾಲ್ಲೂಕಿನ ದೊಡ್ಡ ಕಾನ್ಯ ಚಿಕ್ಕಕಾನ್ಯ ಬ್ಯಾತಹಳ್ಳಿ ಸಿಂಧುವಳ್ಳಿ ಗ್ರಾಮದ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ

ಮೈಸೂರು ಜಿಲ್ಲೆಯಲ್ಲಿ ಮಾನವ, ಕಾಡು ಪ್ರಾಣಿ ಸಂಘರ್ಷಕ್ಕೆ ಬ್ರೇಕ್ ಹಾಕಲು ಅರಣ್ಯಾಧಿಕಾರಿಗಳ ಹರಸಾಹಸ