ಅಕ್ಷಯ ತೃತೀಯ: ಈ 8 ವಸ್ತು ಶುಭಕರ

25 April 2025

Pic credit: Google

By: Vijayasarathy

ಶುಭ ಘಳಿಗೆ

2025ರ ಏಪ್ರಿಲ್ 30ರಂದು ಅಕ್ಷಯ ತೃತೀಯ ಇದ್ದು, ಬೆಳಗ್ಗೆ 5:41ರಿಂದ 12:18ರವರೆಗೆ ಶುಭ ಕೆಲಸ ಆರಂಭಿಸುವುದು ಶುಭಕರ.

Pic credit: Google

ಚಿನ್ನ

ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವುದರಿಂದ ಸಮೃದ್ಧತೆ ಸಿಗುತ್ತದೆ. ಇನ್ನೂ ಕೆಲ ವಸ್ತುಗಳ ಖರೀದಿಯೂ ಮಂಗಳಕರ ಎನ್ನುವ ನಂಬಿಕೆ ಇದೆ.

Pic credit: Google

ಬೆಳ್ಳಿ

ಚಿನ್ನದ ರೀತಿಯಲ್ಲಿ ಬೆಳ್ಳಿಯನ್ನೂ ಸಂಪತ್ತು ಮತ್ತು ಶುದ್ಧತೆಗೆ ಪ್ರತೀಕವೆಂದು ಭಾವಿಸಲಾಗುತ್ತದೆ.

Pic credit: Google

ಜಮೀನು

ಸೈಟು, ಜಮೀನು, ಫ್ಲ್ಯಾಟು ಇತ್ಯಾದಿ ರಿಯಲ್ ಎಸ್ಟೇಟ್ ಮೇಲೆ ಅಕ್ಷಯ ತೃತೀಯದಂದು ಹೂಡಿಕೆ ಮಾಡಬಹುದು.

Pic credit: Google

ವಾಹನ

ಅಕ್ಷಯ ತೃತೀಯದಂದು ಹೊಸ ವಾಹನ ಖರೀದಿಸುವುದರಿಂದ ಜೀವನ ಪ್ರಯಾಣ ಸುಖಕರವಾಗಿರುತ್ತದೆ.

Pic credit: Google

ಬಟ್ಟೆ

ಅಕ್ಷಯ ತೃತೀಯದಂದು ಹೊಸ ಬಟ್ಟೆ ತೊಟ್ಟರೆ ಅಥವಾ ಉಡುಗೊರೆಯಾಗಿ ನೀಡಿದರೆ ಜೀವನ ತುಂಬಿ ತುಳುಕಬಹುದು.

Pic credit: Google

ಮಡಿಕೆ

ಅಕ್ಷಯ ತೃತೀಯ ದಿನದಂದು ಮಣ್ಣಿನ ಮಡಿಕೆ ಖರೀದಿಸಿದರೆ ಮನೆಯಲ್ಲಿ ಸಂಪತ್ತು ತುಂಬಿ ತುಳುಕಬಹುದು.

Pic credit: Google

ಪುಸ್ತಕ

ಅಕ್ಷಯ ತೃತೀಯ ದಿನದಂದು ಹೊಸ ಪುಸ್ತಕಗಳನ್ನು ಖರೀದಿಸಿ. ಹೊಸ ಕೋರ್ಸ್​​ಗೆ ಸೇರಬೇಕೆಂದಿದ್ದರೆ ಆ ದಿನ ಉತ್ತಮ ಇರುತ್ತದೆ.

Pic credit: Google

ಪಾತ್ರೆ ಪಗಡೆ

ಅಕ್ಷಯ ತೃತೀಯದಂದು ತಾಮ್ರ, ಹಿತ್ತಾಳೆ, ಸ್ಟೇನ್​​ಲೆಸ್ ಸ್ಟೀಲ್ ಇತ್ಯಾದಿ ಪಾತ್ರೆ, ಪಗಡೆ ಖರೀದಿಸಿದರೆ ಕುಟುಂಬ ಸೌಖ್ಯವಾಗಿರುತ್ತದೆ.

Pic credit: Google