20 April 2025
Pic credit: Google
By: Vijayasarathy
ನೀವು ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೆ ಇಪಿಎಫ್ಒ ಅಡಿಯಲ್ಲಿ ಹಲವು ಪ್ರಯೋಜನಗಳನ್ನು ಪಡೆಯಬಹುದು. ಈ ಬಗ್ಗೆ ಮಾಹಿತಿ ಮುಂದಿನ ಸ್ಲೈಡ್ಗಳಲ್ಲಿ...
Pic credit: Google
ಇಪಿಎಫ್ ಯೋಜನೆಗೆ ಜೋಡಿತವಾದ ಯಾವುದೇ ಭಾರತೀಯ ಸಂಸ್ಥೆಯ ಎಲ್ಲಾ ವಿದೇಶೀ ಉದ್ಯೋಗಿಗಳ ಸಂಬಳದಲ್ಲಿ ಇಪಿಎಫ್ಗೆ ಕೊಡುಗೆ ಹೋಗಬೇಕು.
Pic credit: Google
ಭಾರತದೊಂದಿಗೆ ಸೋಷಿಯಲ್ ಸೆಕ್ಯೂರಿಟಿ ಒಪ್ಪಂದ ಹೊಂದಿರುವ ದೇಶದಲ್ಲಿ ಕೆಲಸ ಮಾಡುವ ಭಾರತೀಯ ಉದ್ಯೋಗಿಗಳು ಇಪಿಎಫ್ ಸೌಲಭ್ಯ ಪಡೆಯಬಹುದು.
Pic credit: Google
ಉದ್ಯೋಗಿಯ ಬೇಸಿಕ್ ಪೇನಿಂದ ಇಪಿಎಫ್ ಅಕೌಂಟ್ಗೆ ಶೇ. 12ರಷ್ಟು ಕೊಡುಗೆ ಹೋಗುತ್ತದೆ. ಕಂಪನಿ ವತಿಯಿಂದಲೂ ಇಷ್ಟೇ ಕೊಡುಗೆ ಇರುತ್ತದೆ. ಆದರೆ, ಭಾರತದಲ್ಲಿ ವೇಜ್ ಸೀಲಿಂಗ್ ಇದೆ.
Pic credit: Google
ಆದರೆ, ಅಂತಾರಾಷ್ಟ್ರೀಯ ಉದ್ಯೋಗಿಗೆ ವೇಜ್ ಸೀಲಿಂಗ್ ಇರುವುದಿಲ್ಲ. ಅಂದರೆ, ಒಂದು ಲಕ್ಷ ರೂ ಬೇಸಿಕ್ ಸ್ಯಾಲರಿ ಇದ್ದರೆ 12,000 ರೂ ಅನ್ನು ಇಪಿಎಫ್ಗೆ ಕೊಡುಗೆ ನೀಡಬಹುದು.
Pic credit: Google
ಭಾರತವು 20 ದೇಶಗಳೊಂದಿಗೆ ಸೋಷಿಯಲ್ ಸೆಕ್ಯೂರಿಟಿ ಒಪ್ಪಂದ ಮಾಡಿಕೊಂಡಿದೆ. ಆ ದೇಶಗಳೆಂದರೆ ಆಸ್ಟ್ರೇಲಿಯಾ, ಜಪಾನ್, ಕೆನಡಾ, ಜರ್ಮನಿ...
Pic credit: Google
...ಬೆಲ್ಜಿಯಂ, ಸ್ವಿಸ್, ಫ್ರಾನ್ಸ್, ಡೆನ್ಮಾರ್ಕ್, ಕೊರಿಯಾ, ನೆದರ್ಲ್ಯಾಂಡ್ಸ್, ಹಂಗೆರಿ, ಫಿನ್ಲ್ಯಾಂಡ್, ಸ್ವೀಡನ್, ಚೆಕ್, ಪೋರ್ಚುಗಲ್, ನಾರ್ವೆ ಮೊದಲಾದ ದೇಶಗಳೊಂದಿಗೆ ಒಪ್ಪಂದ ಇದೆ.
Pic credit: Google
ಒಪ್ಪಂದ ಇರುವ ದೇಶಕ್ಕೆ ಭಾರತೀಯರು ಕೆಲಸಕ್ಕೆ ಹೋದಾಗ ಇಪಿಎಫ್ ಅನ್ನೇ ಮುಂದುವರಿಸಬಹುದು. ಇಲ್ಲದಿದ್ದರೆ ಆ ದೇಶದ ಸ್ಕೀಮ್ ಬೇಕಾದರೆ ಪಡೆಯಬಹುದು.
Pic credit: Google