ಮಾರ್ಕೆಟ್ ಡೌನ್ ಆದಾಗ ಹೂಡಿಕೆ ನಿಲ್ಲಿಸಬೇಕಾ?

18 April 2025

Pic credit: Google

By: Vijayasarathy

ಷೇರು ಮಾರುಕಟ್ಟೆ ತೀವ್ರವಾಗಿ ಅಲುಗಾಡುತ್ತಿದ್ದರೆ ಹೂಡಿಕೆ ಮಾಡಬೇಕಾ, ಬೇಡವಾ ಎನ್ನುವ ಗೊಂದಲ ಸಹಜವಾಗಿರುತ್ತದೆ.

ಗೊಂದಲ ಸಹಜ

Pic credit: Google

ಭಾರತದಲ್ಲಿ ಸಾಕಷ್ಟು ದಿನ ಮಾರುಕಟ್ಟೆ ಸಾಕಷ್ಟು ಕುಸಿಯಿತು. ಈಗ ಈ ವಾರ ಉತ್ತಮವಾಗಿ ಚೇತರಿಕೆ ಕಂಡಿದೆ.

ಕುಸಿತ, ಚೇತರಿಕೆ

Pic credit: Google

ಅಮೆರಿಕ ಆರಂಭಿಸಿದ ಟ್ಯಾರಿಫ್ ಸಮರ ಮತ್ತು ಎಐ ತಂತ್ರಜ್ಞಾನ ಬೆಳವಣಿಗೆಯು ಮಾರುಕಟ್ಟೆಯನ್ನು ಗೊಂದಲ ಮತ್ತು ಭಯಕ್ಕೆ ಕೆಡವಿದೆ.

ಟ್ಯಾರಿಫ್ ಎಫೆಕ್ಟ್

Pic credit: Google

ರಫ್ತು ಕೇಂದ್ರಿತವಾದ ವಿಭಾಗ ಮತ್ತು ಐಟಿ ಸ್ಟಾಕ್​​​ಗಳನ್ನು ಸದ್ಯಕ್ಕೆ ಕಡೆಗಣಿಸಿ, ಬ್ಯಾಂಕಿಂಗ್, ಎಫ್​​ಎಂಸಿಜಿಯಂತಹ ಸೆಕ್ಟರ್​ಗೆ ಹೂಡಿಕೆ ಮಾಡಬಹುದು.

ಗಮನ ಇದರಲ್ಲಿರಲಿ

Pic credit: Google

ಮಾರುಕಟ್ಟೆ ಕುಸಿತದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಎಮರ್ಜೆನ್ಸಿ ಫಂಡ್ ಇಟ್ಟುಕೊಂಡು, ಆರಾಮವಾಗಿ ಇರಿ. ಮಾರುಕಟ್ಟೆ ಮತ್ತೆ ಮೇಲೇರುತ್ತೆ.

ಮೇಲೆರುತ್ತೆ ಮಾರ್ಕೆಟ್

Pic credit: Google

ಮಾರುಕಟ್ಟೆ ಬಿದ್ದಿದೆ ಎಂದರೆ ಅದು ಮಾರ್ಕೆಟ್ ಕರೆಕ್ಷನ್ ಆಗಿದೆ ಎಂದು ಭಾವಿಸಿ. ಉತ್ತಮ ಷೇರುಗಳನ್ನು ಉತ್ತಮ ಬೆಲೆಗೆ ಖರೀದಿಸುವ ಅವಕಾಶ ಸಿಗುತ್ತದೆ.

ಮಾರ್ಕೆಟ್ ಕರೆಕ್ಷನ್

Pic credit: Google

ಮಾರುಕಟ್ಟೆ ಏರಿಳಿತ ಹೇಗೇ ಇರಲಿ, ಎಸ್​​ಐಪಿ ಮುಂದುವರಿಸಿ. ಮಾರುಕಟ್ಟೆ ಬಿದ್ದಾಗ ಹೆಚ್ಚು ಖರೀದಿಸಬಹುದು. ಕಾಂಪೌಂಡಿಂಗ್ ಲಾಭ ನಿಮ್ಮದಾಗುತ್ತದೆ.

ಎಸ್​​ಐಪಿ ಮುಂದುವರಿಸಿ

Pic credit: Google

ಮಾರುಕಟ್ಟೆ ಬಿದ್ದಾಗ ಮ್ಯುಚುವಲ್ ಫಂಡ್​ನ ಎಸ್​​ಐಪಿಯಲ್ಲಿನ ನಿಮ್ಮ ಹೂಡಿಕೆಗೆ ಹೆಚ್ಚು ಯುನಿಟ್ ಸಿಗುತ್ತದೆ. ಮಾರುಕಟ್ಟೆ ಚೇತರಿಸಿಕೊಂಡಾಗ ಲಾಭ ಹೆಚ್ಚುತ್ತದೆ.

ಹೆಚ್ಚು ಎನ್​​ಎವಿ

Pic credit: Google