14 April 2025
Pic credit: Google
ಭಾರತದ ಅತಿದೊಡ್ಡ ಹಗರಣಗಳಿವು...
By: Vijayasarathy
2008ರಲ್ಲಿ ಬೆಳಕಿಗೆ ಬಂದ ಇದು 1.76 ಲಕ್ಷ ಕೋಟಿ ರೂ ಹಗರಣ. ಟೆಲಿಕಾಂ ಲೈಸೆನ್ಸ್ ನಿಯಮ ಪಾಲಿಸದ್ದರಿಂದ ಸರ್ಕಾರದ ಆದಾಯಕ್ಕೆ ನಷ್ಟ ತಂದ ಆರೋಪ ಇದೆ.
Pic credit: Google
2ಜಿ ಸ್ಪೆಕ್ಟ್ರಂ
2010ರಲ್ಲಿ ದೆಹಲಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ ಆಯೋಜನೆಗೆಂದಿದ್ದ ಫಂಡ್ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇರುವ ಇದು 70,000 ಕೋಟಿ ರೂ ಹಗರಣ.
Pic credit: Google
ಕಾಮನ್ವೆಲ್ತ್ ಗೇಮ್ಸ್
2012ರಲ್ಲಿ ಬೆಳಕಿಗೆ ಬಂದ 1.86 ಲಕ್ಷ ಕೋಟಿ ರೂ ಹಗರಣ ಇದು. ಕಲ್ಲಿದ್ದಲು ನಿಕ್ಷೇಪಗಳನ್ನು ಸರಿಯಾಗಿ ಬಿಡ್ ಮಾಡದೇ ವಿತರಿಸಿದ ಆರೋಪ ಇದೆ.
Pic credit: Google
ಕಲ್ಲಿದ್ದಲು ಹಗರಣ
13,000 ಕೋಟಿ ರೂನ ಪಿಎನ್ಬಿ ಹಗರಣ 2018ರಲ್ಲಿ ಬೆಳಕಿಗೆ ಬಂತು. ಮೆಹುಲ್ ಚೋಕ್ಸಿ, ನೀರವ್ ಮೋದಿ ನಕಲಿ ಶೂರಿಟಿ ಪಡೆದು ಸಾವಿರಾರು ಕೋಟಿ ರೂ ಸಾಲ ಪಡೆದು ವಂಚಿಸಿದ ಆರೋಪ ಇದೆ.
Pic credit: Google
ಪಿಎನ್ಬಿ ಹಗರಣ
1992ರಲ್ಲಿ ಸ್ಟಾಕ್ ಬ್ರೋಕರ್ ಹರ್ಷದ್ ಮೆಹ್ತಾ ನಕಲಿ ಬ್ಯಾಂಕ್ ರಸೀದಿಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ವಂಚನೆ ಮಾಡಿದ್ದರು. ಆಗಲೇ ಇದು 4,000 ಕೋಟಿ ರೂ ಹಗರಣವಾಗಿತ್ತು.
Pic credit: Google
ಹರ್ಷದ್ ಮೆಹ್ತಾ
14,000 ಕೋಟಿ ರೂನ ಅತಿದೊಡ್ಡ ಕಾರ್ಪೊರೇಟ್ ಸ್ಕ್ಯಾಮ್ ಇದು. ಸತ್ಯಂ ಕಂಪ್ಯೂಟರ್ಸ್ನ ರಾಮಲಿಂಗರಾಜು ಕಂಪನಿ ಆದಾಯ ವಿಚಾರದಲ್ಲಿ ಸುಳ್ಳು ಹೇಳಿದ್ದರು.
Pic credit: Google
ಸತ್ಯಂ ಹಗರಣ
ಪಶ್ಚಿಮ ಬಂಗಾಳದ ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಸ್ಕೀಮ್ ಮೂಲಕ 30,000 ಕೋಟಿ ರೂ ವಂಚನೆ ಆಗಿರುವ ಆರೋಪ ಇದೆ. ಈ ಸ್ಕೀಮ್ಗಳ ಹಿಂದೆ ರಾಜಕೀಯ ವಾಸನೆಯೂ ಇದೆ.
Pic credit: Google
ಚಿಟ್ ಫಂಡ್
9,000 ಕೋಟಿ ರೂ ಸ್ಕ್ಯಾಮ್. ವಿಜಯ್ ಮಲ್ಯ ವಿವಿಧ ಭಾರತೀಯ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದ ಆರೋಪ ಇದೆ. ಸದ್ಯ ಇವರು ಬ್ರಿಟನ್ನಲ್ಲಿದ್ದಾರೆ.
Pic credit: Google
ವಿಜಯ್ ಮಲ್ಯ
ಮಕ್ಕಳಿಗೆ ಆಸ್ತಿ ಕೊಡದ ಶ್ರೀಮಂತರು
ಭಾರತದ ಅತ್ಯಂತ ಹಳೆಯ ಲಿಸ್ಟೆಡ್ ಷೇರುಗಳು
ವಾರನ್ ಬಫೆಟ್ ಸಕ್ಸಸ್ ಸೀಕ್ರೆಟ್ಸ್