ಬೇಡ ಬೇಡ ಬೇಡ: ವಾರನ್ ಬಫೆಟ್ ಸಕ್ಸಸ್ ಸೀಕ್ರೆಟ್
04 April 2025
Pic credit: Google
By: Vijayasarathy
ಕೆಲಸ ಪರ್ಫೆಕ್ಟ್ ಆಗುವವರೆಗೂ ಕಾಯುತ್ತೇನೆ ಎನ್ನುವುದನ್ನು ಬಿಡಿ. ಇದರಿಂದ ನಿಮ್ಮ ಗುರಿಸಾಧನೆ ವಿಳಂಬವಾಗಬಹುದು: ವಾರನ್ ಬಫೆಟ್
ಪರ್ಫೆಕ್ಷನ್ ಬೇಡ
Pic credit: Google
ಮುಖ್ಯವಾದ ಕೆಲಸ ಯಾವುದೇ ಇದ್ದರೂ ನಾಳೆ ಮಾಡಿದರಾಯಿತು ಎನ್ನುವ ಉದಾಸೀನ ಪ್ರವೃತ್ತಿ ಬಿಟ್ಟು, ಇವತ್ತೇ ಮಾಡಲು ಯತ್ನಿಸಿ: ವಾರನ್ ಬಫೆಟ್
ಔದಾಸೀನ್ಯತೆ ಬೇಡ
Pic credit: Google
ಏಕಕಾಲದಲ್ಲಿ ಹಲವು ಕೆಲಸ ಮಾಡ್ತೀನಿ ಅಂತ ಮಲ್ಟಿಟ್ಯಾಸ್ಕಿಂಗ್ಗೆ ಇಳಿಯದಿರಿ. ಒಮ್ಮೆಗೆ ಒಂದು ಕೆಲಸದತ್ತ ಗಮನ ಹರಿಸುವುದು ಉತ್ತಮ: ವಾರನ್ ಬಫೆಟ್
ಮಲ್ಟಿಟ್ಯಾಸ್ಕಿಂಗ್ ಬೇಡ
Pic credit: Google
ಸ್ವವಿಮರ್ಶೆ ಒಳ್ಳೆಯದು. ಆದರೆ ಆತ್ಮನಿಂದನೆ ಬೇಡ. ಅದು ಕೀಳರಿಮೆಯ ಸಂಕೇತ. ನಿಮ್ಮನ್ನು ವೈಯಕ್ತಿಕವಾಗಿ ಕುಂದಿಸುತ್ತದೆ: ವಾರನ್ ಬಫೆಟ್
ಆತ್ಮನಿಂದನೆ ಬೇಡ
Pic credit: Google
ನಿಮ್ಮ ಬ್ಯುಸಿನೆಸ್ ಮೂಲಭೂತ ಸಮಸ್ಯೆಗಳಿಂದಾಗಿ ನಷ್ಟದಲ್ಲಿದ್ದರೆ ಅದರಿಂದ ಹೊರಬಂದು ಬೇರೆ ಬ್ಯುಸಿನೆಸ್ ಮಾಡುವುದು ಉತ್ತಮ: ವಾರನ್ ಬಫೆಟ್
ಮುಳುಗುವ ಹಡಗು ಬೇಡ
Pic credit: Google
ಯಾವುದೇ ನಿರ್ಧಾರವನ್ನೂ ಅವಸರದಿಂದ ತೆಗೆದುಕೊಳ್ಳಬಾರದು. ಸಾಕಷ್ಟು ಯೋಚಿಸಿ, ಓದಿ, ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬನ್ನಿರಿ: ವಾರನ್ ಬಫೆಟ್
ಆತುರ ಬೇಡ
Pic credit: Google
ಅವರೆಲ್ಲರೂ ಮಾಡುತ್ತಿದ್ದಾರೆ, ನಾನೂ ಮಾಡುತ್ತೇನೆ ಎನ್ನುವುದು ಮೂರ್ಖತನ. ಸ್ವತಂತ್ರವಾಗಿ ಯೋಚಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ: ವಾರನ್ ಬಫೆಟ್
ಕುರುಡತನ ಬೇಡ
Pic credit: Google
ಗುರಿಗೆ ಪೂರಕವಲ್ಲದ ಕಾರ್ಯಗಳಿಗೆ ಸಮಯ ವ್ಯರ್ಥ ಮಾಡದಿರಿ. ಯಶಸ್ಸು ಸುಲಭಗೊಳಿಸುವ ಚಟುವಟಿಕೆಯತ್ತ ಗಮನ ಇಡಿ: ವಾರನ್ ಬಫೆಟ್
ನಾನ್ಸೆನ್ಸ್ ಬೇಡ
Pic credit: Google
ಭಾರತದ ರೋಷನಿ ನಾದರ್, ವಟಾಪ್-5 ಶ್ರೀಮಂತೆ
ಸಾಲದ ಸುಳಿಯಿಂದ ಹೊರಬರುವ ಉಪಾಯ
ಫೋರ್ಬ್ಸ್ 2025: ಟಾಪ್-10 ಶ್ರೀಮಂತರು