ಇವತ್ತಿನ ದಿನಮಾನದಲ್ಲಿ ಸಾಲ ಮಾಡದ ವ್ಯಕ್ತಿಗಳು ವಿರಳ. ಆದರೆ, ಸಾಲದ ಶೂಲದಿಂದ ಬೇಗ ಪಾರಾಗುವುದು ಜಾಣತನ. ಅದರ ಸುಳಿಯಿಂದ ಹೊರಬರಲು ಕೆಲ ಟಿಪ್ಸ್ ಇಲ್ಲಿವೆ...
Pic credit: Google
1. ಸ್ನೋಬಾಲ್ ವಿಧಾನ
ಮೈತುಂಬ ಸಾಲಗಳಿದ್ದು, ಉತ್ಸಾಹವೇ ಅಡಗಿಕೊಂಡವರಿಗೆ ಸ್ನೋಬಾಲ್ ವಿಧಾನ ಉಪಯುಕ್ತ. ಸಾಲಗಳ ಗಾತ್ರದ ಅನುಸಾರ ಪಟ್ಟಿ ಮಾಡಿ, ಕಡಿಮೆ ಮೊತ್ತದ ಸಾಲಗಳನ್ನು ಮೊದಲು ತೀರಿಸಿ. ಇದರಿಂದ ಉತ್ಸಾಹ ಹೆಚ್ಚುತ್ತದೆ.
Pic credit: Google
2. ಹಿಮಪಾತ ವಿಧಾನ
ಇಲ್ಲಿ ಒಂದಕ್ಕಿಂತ ಹೆಚ್ಚು ಸಾಲಗಳಿದ್ದರೆ ಅತ್ಯಧಿಕ ಬಡ್ಡಿ ಇರುವ ಸಾಲಗಳನ್ನು ತೀರಿಸಲು ಮೊದಲ ಆದ್ಯತೆ ನೀಡಬೇಕು. ಇದರಿಂದ ದೀರ್ಘಾವಧಿಯಲ್ಲಿ ಸಾಕಷ್ಟು ಹಣ ಉಳಿಸಬಹುದು.
Pic credit: Google
3. ಅಡಮಾನ ಸಾಲ
ನೀವು ಅಧಿಕ ಬಡ್ಡಿಯ ಸಾಲಕ್ಕೆ ಸಿಲುಕಿದ್ದರೆ ಆಗ ಜಮೀನು, ಮನೆ, ಚಿನ್ನ, ಪಿಪಿಎಫ್, ಇನ್ಷೂರೆನ್ಸ್ ಇತ್ಯಾದಿ ಆಸ್ತಿ ಆಧಾರದ ಮೇಲೆ ಕಡಿಮೆ ಬಡ್ಡಿಗೆ ಸಾಲ ಪಡೆಯಬಹುದು.
Pic credit: Google
4. ಇಎಂಐ ಸಂಖ್ಯೆ
ಸಾಲ ತುಂಬಾ ದೀರ್ಘ ಅವಧಿಯದ್ದಾಯಿತು ಎನಿಸುತ್ತಿದ್ದಲ್ಲಿ ಬ್ಯಾಂಕ್ ಜೊತೆ ಮಾತನಾಡಿ ಇಎಂಐ ಕಂತುಗಳ ಸಂಖ್ಯೆ ಕಡಿಮೆ ಮಾಡಲು ಯತ್ನಿಸಿ. ಇದರಿಂದ ಬೇಗ ಸಾಲ ತೀರಿಸಬಹುದು.
Pic credit: Google
5. ಬಂಧು ಮಿತ್ರರ ನೆರವು
ನೀವು ಅಧಿಕ ಬಡ್ಡಿಯ ಸಾಲದ ಸುಳಿಯಲ್ಲಿದ್ದರೆ ಆಗ ಬಂಧು ಮಿತ್ರರಿಂದ ತಾತ್ಕಾಲಿಕ ಅವಧಿಗೆ ಸಾಲ ಪಡೆಯಬಹುದು. ಆದರೆ, ವಾಪಸ್ ಕೊಡಲು ಶಕ್ಯರಿದ್ದಲ್ಲಿ ಮಾತ್ರ.
Pic credit: Google
6. ಆದಾಯ ಹೆಚ್ಚಿಸಿ
ಸಾಲ ತೀರಿಸಲು ಕಷ್ಟವಾಗುತ್ತಿದ್ದಲ್ಲಿ ನಿಮ್ಮ ಆದಾಯ ಹೆಚ್ಚಿಸಲು ಮಾರ್ಗೋಪಾಯ ಹುಡುಕಿರಿ. ನಿಮಗೆ ಹೊಂದಿಕೆಯಾಗುವ ಸೈಡ್ ಬಿಸಿನೆಸ್ ಆಯ್ದುಕೊಳ್ಳಿ. ಇದರಿಂದ ಬೇಗ ಸಾಲ ತೀರಿಸಬಹುದು.
Pic credit: Google
7. ಕೌನ್ಸಲಿಂಗ್ ಪಡೆಯಿರಿ
ನಿಮಗೆ ಸಾಲ ಹೇಗೆ ತೀರಿಸಬೇಕೆಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದರೆ, ಹಣಕಾಸು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿರಿ. ಅವರು ನಿಮಗೆ ಸೂಕ್ತ ಮಾರ್ಗೋಪಾಯ ತಿಳಿಸಬಹುದು.