2025ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ಬಗ್ಗೆ ವರದಿ ಮಾಡಿರುವ ಐಎಂಎಫ್, ಈ ವರ್ಷ ವಿವಿಧ ದೇಶಗಳ ಜಿಡಿಪಿ ಪಟ್ಟಿ ಮಾಡಿದೆ. ಭಾರತ ಸೇರಿ ಕೆಲ ಅಗ್ರ ದೇಶಗಳ ಜಿಡಿಪಿ ವಿವರ...
Pic credit: Google
1. ವಿಶ್ವದ ಅತಿದೊಡ್ಡ ಆರ್ಥಿಕತೆ ಎನಿಸಿರುವ ಅಮೆರಿಕ ತನ್ನ ಪಟ್ಟ ಮುಂದುವರಿಸಿದೆ. ಇದರ ಜಿಡಿಪಿ 2025ರಲ್ಲಿ 30.3 ಟ್ರಿಲಿಯನ್ ಡಾಲರ್ನಷ್ಟಿದೆ.
Pic credit: Google
2. ಚೀನಾ 2025ರಲ್ಲಿ 19.5 ಟ್ರಿಲಿಯನ್ ಡಾಲರ್ ಗಾತ್ರದ ಜಿಡಿಪಿ ಹೊಂದಿದೆ. ಅಮೆರಿಕ ಬಿಟ್ಟರೆ ಚೀನಾವೇ ಅತಿದೊಡ್ಡ ಆರ್ಥಿಕತೆ ಹೊಂದಿರುವುದು.
Pic credit: Google
3. ಜರ್ಮನಿ ದೇಶ 4.9 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಎನಿಸಿದೆ.
Pic credit: Google
4. ಜಪಾನ್ 4.4 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆ ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಇದು ಹೆಚ್ಚಿನ ಬೆಳವಣಿಗೆ ಕಂಡಿಲ್ಲ.
Pic credit: Google
5. ಭಾರತ ಕಳೆದ ಎರಡು ದಶಕದಲ್ಲಿ ಬಹಳ ವೇಗದಲ್ಲಿ ಆರ್ಥಿಕ ಅಭಿವೃದ್ದಿ ಸಾಧಿಸುತ್ತಿದೆ. ಈಗ ಅದರ ಜಿಡಿಪಿ 4.3 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿದೆ.
Pic credit: Google
6. ಯುಕೆ ದೇಶ 3.7 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಇದು ಆರನೇ ಸ್ಥಾನದಲ್ಲಿದೆ.
Pic credit: Google
7. ಫ್ರಾನ್ಸ್, ಇಟಲಿ, ಕೆನಡಾ ಮತ್ತು ಬ್ರೆಜಿಲ್ ದೇಶಗಳು ಕ್ರಮವಾಗಿ 3.3, 2.5, 2.3 ಮತ್ತು 2.3 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ್ದು, ಟಾಪ್-10 ಪಟ್ಟಿಯಲ್ಲಿರುವ ಇತರ ದೇಶಗಳಾಗಿವೆ.