ಐಪಿಎಲ್ 2024ರ ಸೀಸನ್ನಲ್ಲಿ ಆರ್ಸಿಬಿ ಪಂದ್ಯಗಳಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರೀಮಿಯಮ್ ಸೀಟ್ನ ಬೆಲೆ 55,055 ರೂಗೆ ಏರಿತ್ತು. ಈ ಬಾರಿ ಯಾವ್ಯಾವ ಸ್ಟೇಡಿಯಂಗಳಲ್ಲಿ ಎಷ್ಟಿದೆ ಟಿಕೆಟ್ ದರ...?
ಸಿಎಸ್ಕೆ
Pic credit: Google
2025ರ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೋಂ ಗ್ರೌಂಡ್ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಟಿಕೆಟ್ ಬೆಲೆ 700 - 15,000 ರೂ ಇರಬಹುದು ಎಂಬ ಅಂದಾಜಿದೆ.
ಮುಂಬೈ ಇಂಡಿಯನ್ಸ್
Pic credit: Google
ಅತಿಹೆಚ್ಚು ಬಾರಿ ಐಪಿಎಲ್ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಹೋಂ ಗ್ರೌಂಡ್ ಆದ ವಾಂಖೆಡೆ ಸ್ಟೇಡಿಯಂನಲ್ಲಿ 800 ರೂನಿಂದ ಆರಂಭವಾಗಿ 35,000 ರೂವರೆಗೂ ಟಿಕೆಟ್ ಬೆಲೆ ಇದೆ.
ಆರ್ಸಿಬಿ
Pic credit: Google
ಎಲ್ಲಾ ಸೀಸನ್ಗಳಲ್ಲೂ ಡೈ ಹಾರ್ಡ್ ಫ್ಯಾನ್ಸ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭಾವ್ಯ ಟಿಕೆಟ್ ಬೆಲೆ 1,500ರಿಂದ 18,000 ರೂ ಇದೆ.
ಕೆಕೆಆರ್
Pic credit: Google
ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೋಮ್ ಗ್ರೌಂಡ್ ಆದ ಈಡನ್ ಗಾರ್ಡನ್ಸ್ನಲ್ಲಿ 2025ರ ಸೀಸನ್ಗೆ ಟಿಕೆಟ್ ಬೆಲೆ 400 ರೂನಿಂದ 14,000 ರೂವರೆಗೆ ಇರಬಹುದು.
ಎಸ್ಆರ್ಎಚ್
Pic credit: Google
ಸನ್ ರೈಸರ್ಸ್ ಹೈದರಾಬಾದ್ ತಂಡದ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಈ ಸೀಸನ್ನಲ್ಲಿ ಟಿಕೆಟ್ ಬೆಲೆ ಅಂದಾಜು 400 ರೂನಿಂದ 18,000 ರೂವರೆಗೂ ಇರಬಹುದು.
ಡೆಲ್ಲಿ ತಂಡ
Pic credit: Google
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಮ್ ಗ್ರೌಂಡ್ ಆದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯದ ಟಿಕೆಟ್ ಬೆಲೆ 500ರಿಂದ ಆರಂಭವಾಗಿ 15,000 ರೂವರೆಗೆ ಇರಬಹುದು.
ಆರ್ ಆರ್
Pic credit: Google
ರಾಜಸ್ಥಾನ್ ರಾಯಲ್ಸ್ ತಂಡದ ಹೋಮ್ ಗ್ರೌಂಡ್ ಆದ ಸವಾಯ್ ಮಾನಸಿಂಗ್ ಸ್ಟೇಡಿಯಂನಲ್ಲಿ ಟಿಕೆಟ್ ಬೆಲೆ 500ರಿಂದ 15,000 ರೂ ಇರಬಹುದು.
ಗುಜರಾತ್ ಟೀಮ್
Pic credit: Google
ಗುಜರಾತ್ ಟೈಟಾನ್ಸ್ ತಂಡದ ಹೋಂ ಗ್ರೌಂಡ್ ಆದ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿಕೆಟ್ ಬೆಲೆ 25,000 ರೂವರೆಗೂ ಇರುವ ಅಂದಾಜಿದೆ.
ಎಲ್ಎಸ್ಜಿ
Pic credit: Google
ಲಕ್ನೋ ಸೂಪರ್ ಜೇಂಟ್ಸ್ ತಂಡದ ಹೋಮ್ ಗ್ರೌಂಡ್ ಆದ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿಕೆಟ್ ಬೆಲೆ 750ರಿಂದ 10,000 ರೂನಷ್ಟಿರಬಹುದು ಎನ್ನಲಾಗಿದೆ.