18 Mar 2025
Pic credit: Google
Vijayasarathy SN
ಭಾರತದ ಉದ್ಯಮ ವಾತಾವರಣದಲ್ಲಿ ಪ್ರತೀ ವರ್ಷ ಹಲವು ಹೊಸ ಆಂಟ್ರಪ್ರನ್ಯೂರ್ಗಳು ಚಿಗುರುತ್ತಿದ್ದಾರೆ. 2025ರಲ್ಲಿ ಕೆಲ ಪ್ರಮುಖ ಮಹಿಳೆಯರನ್ನು ನೋಡುವುದಾದರೆ...
Pic credit: Google
ಒಳಾಂಗಣ ವಿನ್ಯಾಸ ಸೇವೆ ನೀಡುವ ಸೋನಾಲಿ ಆಶಾರ್ ಡಿಸೈನ್ಸ್ನ ಸಂಸ್ಥಾಪಕಿ ಸೋನಾಲಿ ಆಶಾರ್ ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ.
Pic credit: Google
ಅರ್ಚನಾ ಖೋಸ್ಲಾ ಬರ್ಮನ್ ಅವರು ಕಾನೂನು ಸೇವೆ ನೀಡುವ ವರ್ಟಿಸಸ್ ಪಾರ್ಟ್ನರ್ಸ್ನ ಸಹ-ಸಂಸ್ಥಾಪಕಿ. ಎಫ್ಐಸಿಸಿಐನ ಮಾಜಿ ಮುಖ್ಯಸ್ಥೆಯಾದ ಅವರು ಹಲವು ಬೇರೆ ಬೇರೆ ಸ್ಟಾರ್ಟಪ್ಗಳಿಗೆ ಮಾರ್ಗದರ್ಶಕಿಯಾಗಿದ್ದಾರೆ.
Pic credit: Google
ಶಾಲಿನಿ ಶರ್ಮಾ ಅವರು ಪ್ರೀಸ್ಕೂಲ್ ಆದ ಹಾಯ್ ಕಲ್ಪಾ ಎನ್ನುವ ಪ್ರೀಸ್ಕೂಲ್ಗಳ ಸಂಸ್ಥಾಪಕಿ ಮತ್ತು ಸಿಇಒ. ಎನ್ಇಪಿ ಮಾರ್ಗಸೂಚಿಗಳನ್ನು ತಮ್ಮ ಶಾಲೆಗಳಲ್ಲಿ ಯಶಸ್ವಿಯಾಗಿ ಅಳವಡಿಸಿದ್ದಾರೆ.
Pic credit: Google
ಕಂಟೆಂಟ್ ಮತ್ತು ಡಿಸೈನ್ ಏಜೆನ್ಸಿಯಾದ ವರ್ಡ್ಸ್ವರ್ಕ್ನ ಸಂಸ್ಥಾಪಕಿ ಮತ್ತು ಸಿಇಒ ಆದ ಸುಧಾ ಮಹೇಶ್ವರಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಛಾಪು ಮೂಡಿಸಿದ್ದಾರೆ.
Pic credit: Google
ಕರಿಯರ್ಪೀಡಿಯಾ ಸಂಸ್ಥೆಯ ಸಿಇಒ ಆದ ಜ್ಯೋಷ್ನಾ ರೆಡ್ಡಿ ಹೈದರಾಬಾದ್ನಲ್ಲಿ ಬ್ಯುಸಿನೆಸ್ ನಡೆಸುತ್ತಿದ್ದಾರಾದರೂ ಬೆಂಗಳೂರಿನಲ್ಲಿ ವೃತ್ತಿಯ ಪಟ್ಟುಗಳನ್ನು ಕಲಿತವರು.
Pic credit: Google
ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಆಪರೇಷನ್ಸ್ ಡೈರೆಕ್ಟರ್ ಆದ ತಾನ್ವಿ ಲುನಾವತ್, ಕ್ರೀಡಾ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.
Pic credit: Google
ದೇವಯಾನಿ ಜೈಪುರಿಯಾ ಅವರು ಆರ್ಜೆ ಕಾರ್ಪ್ನ ಛೇರ್ಮನ್ ರವಿ ಜೈಪೂರಿಯಾ ಅವರ ಮಗಳು. ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಇವರು ಮಿಂಚುತ್ತಿದ್ದಾರೆ. ಪ್ರಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಇವರು ಸ್ಥಾಪಿಸಿದ್ದಾರೆ.
Pic credit: Google