Quacquarelli Symonds (QS) ಸಂಸ್ಥೆ ಜಾಗತಿಕ ಯೂನಿವರ್ಸಿಟಿಗಳ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ. ವಿಷಯವಾರು ರ‍್ಯಾಂಕಿಂಗ್ ಇದಾಗಿದ್ದು ಟಾಪ್-50ಯಲ್ಲಿ 9 ಭಾರತಿಯ ವಿವಿಗಳಿವೆ.
Pic credit: Google
ಕ್ಯುಎಸ್ ರ‍್ಯಾಂಕಿಂಗ್
ಮಿನರಲ್ ಮತ್ತು ಮೈನಿಂಗ್ ಎಂಜಿನಿಯರಿಂಗ್ನಲ್ಲಿ ಧನಬಾದ್ನ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ಶಿಕ್ಷಣ ಸಂಸ್ಥೆ ಕ್ಯುಎಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ 20ನೇ ಸ್ಥಾನ ಪಡೆದಿದೆ.
Pic credit: Google
ಐಎಸ್ಎಂ, ಧನಬಾದ್
ಐಐಟಿ ಬಾಂಬೆ ಎರಡು ವಿಷಯಗಳಲ್ಲಿ 28ನೇ ರ‍್ಯಾಂಕಿಂಗ್ ಪಡೆದಿದೆ. ಮಿನರಲ್ ಮತ್ತು ಮೈನಿಂಗ್, ಹಾಗು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ 28ನೇ ಸ್ಥಾನ ಪಡೆದಿದೆ.
Pic credit: Google
ಐಐಟಿ, ಬಾಂಬೆ
ಮಿನರಲ್ ಮತ್ತು ಮೈನಿಂಗ್ ಎಂಜಿನಿಯರಿಂಗ್ನಲ್ಲಿ ಟಾಪ್-50 ರ‍್ಯಾಂಕಿಂಗ್ ಪಡೆದ ಮೂರನೇ ಭಾರತೀಯ ವಿವಿ ಐಐಟಿ ಖರಗ್ಪುರ್. ಇದು 45ನೇ ಸ್ಥಾನ ಪಡೆದಿದೆ.
Pic credit: Google
ಐಐಟಿ ಖರಗ್ಪುರ್
ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಷಯದ ಕ್ಯುಎಸ್ ರ್ಯಾಂಕಿಂಗ್ನಲ್ಲಿ ಭಾರತದ ನಂಬರ್ ಒನ್ ಎನಿಸಿರುವುದು ಐಐಟಿ ಡೆಲ್ಲಿ. ಇದು 28ನೇ ಸ್ಥಾನ ಪಡೆದಿದೆ.
Pic credit: Google
ಐಐಟಿ ಡೆಲ್ಲಿ
ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಷಯದಲ್ಲಿ ಐಐಟಿ ಬಾಂಬೆ, ಐಐಟಿ ಮದ್ರಾಸ್ ಮತ್ತು ಐಐಟಿ ಕಾನಪುರ್ ಸಂಸ್ಥೆಗಳು ಕ್ಯುಎಸ್ ರ್ಯಾಂಕಿಂಗ್ನಲ್ಲಿ 28, 30 ಮತ್ತು 48ನೇ ಸ್ಥಾನ ಪಡೆದಿವೆ.
Pic credit: Google
ಐಐಟಿ ಮದ್ರಾಸ್
ಬ್ಯುಸಿನೆಸ್ ಮತ್ತು ಮ್ಯಾನೇಜ್ಮೆಂಟ್ ಸ್ಟಡೀಸ್ ವಿಷಯದಲ್ಲಿ ಕ್ಯುಎಸ್ ರ್ಯಾಂಕಿಂಗ್ನಲ್ಲಿ ಐಐಎಂ ಅಹ್ಮದಾಬಾದ್ ಮತ್ತು ಐಐಎಂ ಬೆಂಗಳೂರು ಸಂಸ್ಥೆಗಳು ಕ್ರಮವಾಗಿ 27 ಮತ್ತು 40ನೇ ಸ್ಥಾನ ಪಡೆದಿವೆ.