ಇಂಡಿಯನ್ ಪ್ರೀಮಿಯಮ್ ಲೀಗ್ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಎನಿಸಿದೆ. ವರ್ಷದಿಂದ ವರ್ಷಕ್ಕೆ ಐಪಿಎಲ್ ತಂಡಗಳಲ್ಲಿ ಹಣದ ಹೊಳೆ ಹರಿಯುವುದು ಹೆಚ್ಚುತ್ತಲೇ ಇದೆ.
Pic credit: Google
ಐಪಿಎಲ್ನಲ್ಲಿ ಆಟಗಾರರಿಗೆ ಸಖತ್ ಸಂಬಳ ನೀಡಲಾಗುತ್ತಿದೆ. ಹಲವು ವಿದೇಶೀ ಆಟಗಾರರಿಗೆ ತಮ್ಮ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದಷ್ಟು ಹಣವನ್ನು ಸಂಪಾದಿಸುವ ಅವಕಾಶ ಇರುತ್ತದೆ.
Pic credit: Google
ಉದಾಹರಣೆಗೆ, ಆಫ್ಗಾನಿಸ್ತಾನ್ ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡದಲ್ಲಿ ಜೀವಮಾನವಿಡೀ ಆಡಿ ಗಳಿಸಿವುದಕ್ಕಿಂತಲೂ ಹೆಚ್ಚು ಹಣವನ್ನು ಕೆಲವೇ ಸೀಸನ್ ಐಪಿಎಲ್ನಲ್ಲಿ ಸಂಪಾದಿಸಬಲ್ಲುರು.
Pic credit: Google
ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಇತ್ಯಾದಿ ದೇಶಗಳ ಕ್ರಿಕೆಟಿಗರಿಗೂ ಕೂಡ ಐಪಿಎಲ್ ಹಣ ಬಹಳ ಆಕರ್ಷಕ ಎನಿಸುತ್ತದೆ. ಕೆಲ ಆಟಗಾರರು ತಮ್ಮ ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್ಗೆ ಪ್ರಾಶಸ್ತ್ಯ ಕೊಡುವುದುಂಟು.
Pic credit: Google
ಐಪಿಎಲ್ನಲ್ಲಿ ಸಂಪಾದಿಸುವ ಹಣಕ್ಕೆ ಆಟಗಾರರು ಎಷ್ಟು ತೆರಿಗೆ ಕಟ್ಟುತ್ತಾರೆ? ಭಾರತೀಯ ಆಟಗಾರರಿಗೆ ಆದಾಯ ತೆರಿಗೆ ಅನ್ವಯ ಆಗುತ್ತದೆ. ವಿದೇಶೀ ಆಟಗಾರರಿಗೆ ನೇರವಾಗಿ ಟಿಡಿಎಸ್ ಕಡಿತ ಇರುತ್ತದೆ.
Pic credit: Google
ಆರ್ಸಿಬಿಯಲ್ಲಿ ಈ ಸೀಸನ್ನಲ್ಲಿ ವಿರಾಟ್ ಕೊಹ್ಲಿಯ ವಾರ್ಷಿಕ ಸಂಭಾವನೆ 21 ಕೋಟಿ ರೂ. ಅವರು ಐಟಿಆರ್ ಫೈಲ್ ಮಾಡಿದಾಗ ಈ ಹಣಕ್ಕೆ ಶೇ. 30 ತೆರಿಗೆ, ಸರ್ಚಾರ್ಜ್, ಹೆಲ್ತ್ ಸೆಸ್, ಎಜುಕೇಶನ್ ಸೆಸ್ ಕಟ್ಟಬೇಕು.
Pic credit: Google
ಕೊಹ್ಲಿಯ 21 ಕೋಟಿ ಸಂಭಾವನೆಯಲ್ಲಿ ತೆರಿಗೆ ಪಾಲು 8.19 ಕೋಟಿ ಆಗುತ್ತದೆ. ಉಳಿಯುವುದು 12.81 ಕೋಟಿ ರೂ ಮಾತ್ರ. ವರ್ಷಕ್ಕೆ 5 ಕೋಟಿ ರೂಗಿಂತ ಹೆಚ್ಚು ಆದಾಯ ಗಳಿಸುವವರೆಲ್ಲರಿಗೂ ಗರಿಷ್ಠ ಟ್ಯಾಕ್ಸ್ ಇರುತ್ತದೆ.
Pic credit: Google
ಹಾಗಾದರೆ, ವಿದೇಶೀ ಆಟಗಾರರಿಗೆ ಎಷ್ಟು ತೆರಿಗೆ? ಐಪಿಎಲ್ನ ವಿದೇಶೀ ಆಟಗಾರರಿಗೆ ಶೇ. 20 ಟಿಡಿಎಸ್, ಜೊತೆಗೆ ಸರ್ಚಾರ್ಜ್, ಸೆಸ್ ಇತ್ಯಾದಿ ಅನ್ವಯ ಆಗುತ್ತದೆ. ಇದನ್ನು ಮುರಿದುಕೊಂಡೇ ಸಂಭಾವನೆ ನೀಡಲಾಗುತ್ತದೆ.