ಪಿಎಂ ಕಿಸಾನ್ ಯೋಜನೆ: ಈ ರೈತರು ಅನರ್ಹರು

22 July 2025

Pic credit: Google

By: Vijayasarathy

ಸಾಂಸ್ಥಿಕ ಭೂಮಾಲಿಕರು

Pic credit: Google

ಸಾಂಸ್ಥಿಕ ಭೂಮಾಲೀಕರು ಪಿಎಂ ಕಿಸಾನ್ ಯೋಜನೆಗೆ ಅರ್ಹರಿರುವುದಿಲ್ಲ. ಉದಾಹರಣೆಗೆ, ಶಿಕ್ಷಣ ಸಂಸ್ಥೆ, ಕಂಪನಿ ಇತ್ಯಾದಿ ಯಾವುದೇ ಆಗಿರಬಹುದು.

ಜನಪ್ರತಿನಿಧಿಗಳು...

Pic credit: Google

ಮಾಜಿ ಅಥವಾ ಹಾಲಿ ಸಚಿವರು, ಲೋಕಸಭೆ, ರಾಜ್ಯಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು ಇರುವ ರೈತ ಕುಟುಂಬಗಳು.

ಪಂಚಾಯತ್ ಛೇರ್ಮನ್

Pic credit: Google

ನಗರಸಭೆಯ ಮಾಜಿ ಮತ್ತು ಹಾಲಿ ಮೇಯರ್​ಗಳು, ಜಿಲ್ಲಾ ಪಂಚಾಯತ್​ನ ಮಾಜಿ ಮತ್ತು ಹಾಲಿ ಛೇರ್ಮನ್​ಗಳು ಇರುವ ರೈತ ಕುಟುಂಬಗಳು.

ಸರ್ಕಾರಿ ಅಧಿಕಾರಿಗಳು

Pic credit: Google

ಡಿ ಗ್ರೂಪ್ ಉದ್ಯೋಗಿ ಹೊರತುಪಡಿಸಿ ಉಳಿದೆಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾಲಿ ಮತ್ತು ಮಾಜಿ ಅಧಿಕಾರಿಗಳು ಇರುವ ರೈತ ಕುಟುಂಬಗಳು.

ಪಿಂಚಣಿದಾರರು

Pic credit: Google

ತಿಂಗಳಿಗೆ 10,000 ರೂಗಿಂತ ಹೆಚ್ಚಿನ ಮೊತ್ತದ ಪಿಂಚಣಿ ಪಡೆಯುತ್ತಿರುವ ಎಲ್ಲಾ ನಿವೃತ್ತ ಸರ್ಕಾರಿ ನೌಕರರು ಇರುವ ರೈತ ಕುಟುಂಬಗಳು.

ಆದಾಯ ತೆರಿಗೆ

Pic credit: Google

ಕಳೆದ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ ವ್ಯಕ್ತಿಗಳು ಇರುವ ಕುಟುಂಬದವರು ಪಿಎಂ ಕಿಸಾನ್ ಸ್ಕೀಮ್​​ಗೆ ಅರ್ಹರಿರುವುದಿಲ್ಲ.

ವೃತ್ತಿಪರರು

Pic credit: Google

ಡಾಕ್ಟರ್, ಎಂಜಿನಿಯರ್, ಲಾಯರ್, ಸಿಎ, ಆರ್ಕಿಟೆಕ್ಟ್ ಇತ್ಯಾದಿ ವೃತ್ತಿರರು ಇರುವ ರೈತ ಕುಟುಂಬಗಳು ಯೋಜನೆಗೆ ಅನರ್ಹರಾಗಿರುತ್ತಾರೆ.

ಮಾಲೀಕರಲ್ಲದವರು..

Pic credit: Google

ಕೃಷಿಭೂಮಿಯು ರೈತನ ಹೆಸರಲ್ಲಿರಬೇಕು. ಬೇರೆಯವರ ಜಮೀನನ್ನು ಗುತ್ತಿಗೆಗೆ ಪಡೆದು ಉಳುಮೆ ಮಾಡುತ್ತಿರುವ ರೈತರು ಅನರ್ಹರಾಗುತ್ತಾರೆ.