ಎಸ್​ಐಪಿ ಮೂಲಕ ಶ್ರೀಮಂತರಾಗುವ ಟ್ರಿಕ್ಸ್

15 July 2025

Pic credit: Google

By: Vijayasarathy

ಎಸ್​ಐಪಿ ಎಂದರೆ?

ಇದು ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್. ಬ್ಯಾಂಕ್ ಆರ್​ಡಿ ರೀತಿಯಲ್ಲಿ ಪ್ರತೀ ತಿಂಗಳು ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವುದೇ ಎಸ್​ಐಪಿ.

Pic credit: Google

ಬೇಗ ಆರಂಭಿಸಿ

ಯಾವುದೇ ಹೂಡಿಕೆ ಮಾಡಬೇಕೆಂದಿದ್ದರೆ ತಡ ಮಾಡಬೇಡಿ, ಬೇಗ ಆರಂಭಿಸಿ. ಹೂಡಿಕೆ ಹೆಚ್ಚು ಸಮಯ ಇದ್ದಷ್ಟೂ ಹಣ ಬೆಳವಣಿಗೆ ಹೆಚ್ಚುತ್ತಾ ಹೋಗುತ್ತದೆ.

Pic credit: Google

ಸಣ್ಣ ಆರಂಭ

ಸಣ್ಣ ಹೂಡಿಕೆಯೊಂದಿಗೆ ಎಸ್​ಐಪಿ ಶುರು ಮಾಡಬಹುದು. ತಿಂಗಳಿಗೆ 100 ರೂ ಹೂಡಿಕೆ ಅವಕಾಶವೂ ಇದೆ. ಹೋಗುತ್ತಾ ಹೋಗುತ್ತಾ ಹೂಡಿಕೆ ಹೆಚ್ಚಿಸಬಹುದು.

Pic credit: Google

ರೆಗ್ಯುಲರ್ ಹೂಡಿಕೆ

ಮಾರುಕಟ್ಟೆ ಕುಸಿಯುತ್ತಿದೆ ಎನ್ನುವ ಭಯದಲ್ಲಿ ಎಸ್​ಐಪಿ ನಿಲ್ಲಿಸದಿರಿ. ಮಾರುಕಟ್ಟೆ ಸ್ಥಿತಿ ಏನೇ ಇರಲಿ, ನೀವು ಎಸ್​​ಐಪಿ ಮುಂದುವರಿಸಿ.

Pic credit: Google

ದೀರ್ಘಾವಧಿ ಹೂಡಿಕೆ

ನೀವು ಹೆಚ್ಚು ಅವಧಿ ಹೂಡಿಕೆ ಮಾಡಿದಷ್ಟೂ ಅದರ ಮೌಲ್ಯ ಹೆಚ್ಚುತ್ತಾ ಹೋಗುತ್ತದೆ. ಹಣದ ಕಾಂಪೌಂಡಿಂಗ್ ಎಫೆಕ್ಟ್ ಇದು.

Pic credit: Google

ಹೂಡಿಕೆ ವೈವಿಧ್ಯತೆ

ನೀವು ಒಂದಕ್ಕಿಂತ ಹೆಚ್ಚು ಎಸ್​ಐಪಿಗಳನ್ನು ಆರಂಭಿಸಬಹುದು. ಈಕ್ವಿಟಿ, ಡೆಟ್ ಫಂಡ್​ಗಳಲ್ಲಿ ಹೂಡಿಕೆ ಇರಲಿ. ಶೇ. 80 ಈಕ್ವಿಟಿ ಫಂಡ್​ಗಳಿರಲಿ.

Pic credit: Google

ಕಾಸ್ಟ್ ಆ್ಯವರೇಜಿಂಗ್

ಎಸ್​ಐಪಿಯನ್ನು ನಿಲ್ಲಸದೇ ಮುಂದುವರಿಸುವುದರಿಂದ ಆಗುವ ಲಾಭ ರುಪೀ ಕಾಸ್ಟ್ ಆ್ಯವರೇಜಿಂಗ್. ಅಂದರೆ, ಮಾರುಕಟ್ಟೆ ಬಿದ್ದಾಗ ನಿಮಗೆ ಹೆಚ್ಚು  ಯುನಿಟ್ ಸಿಗುತ್ತದೆ.

Pic credit: Google

ಉಳಿತಾಯ ಮುಖ್ಯ

ನೀವು ಹೂಡಿಕೆ ಪ್ರಮಾಣ ಹೆಚ್ಚಿಸಬೇಕೆಂದರೆ ನಿಮ್ಮ ಸಂಪಾದನೆಯಲ್ಲಿ ಉಳಿತಾಯ ಹೆಚ್ಚಿರಬೇಕು. ಅದಕ್ಕೆ ಸರಳ ಜೀವನ ಅಗತ್ಯ.

Pic credit: Google