ಪಿಪಿಎಫ್ ಜನಪ್ರಿಯ ಹೂಡಿಕೆ ಯಾಕೆ?
23 June 2025
Pic credit: Google
By: Vijayasarathy
ದೀರ್ಘಾವಧಿ ಹೂಡಿಕೆ
ಪಿಪಿಎಫ್ ಎಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್. ಇದು ಸರ್ಕಾರದಿಂದ ಖಾತ್ರಿ ಕೊಡಲಾಗಿರುವ ದೀರ್ಘಾವಧಿ ಹೂಡಿಕೆ ಯೋಜನೆ.
Pic credit: Google
ಹೂಡಿಕೆ ಅವಧಿ
ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ಪಿಪಿಎಫ್ ಅಕೌಂಟ್ ತೆರೆಯಬಹುದು. ಕನಿಷ್ಠ ಹೂಡಿಕೆ ಅವಧಿ 15 ವರ್ಷ ಇದೆ. ಬಳಿಕ ವಿಸ್ತರಣೆ ಅವಕಾಶ ಇದೆ.
Pic credit: Google
ಟ್ಯಾಕ್ಸ್ ಡಿಡಕ್ಷನ್
ವರ್ಷಕ್ಕೆ 500 ರೂನಿಂದ 1.5 ಲಕ್ಷ ರೂವರೆಗೆ ಹೂಡಿಕೆ ಮಾಡಲು ಸಾಧ್ಯ. ನಿಮ್ಮ ಹೂಡಿಕೆ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ.
Pic credit: Google
ಬಡ್ಡಿದರ
ಪಿಪಿಎಫ್ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳ ಸಾಲಿಗೆ ಸೇರುತ್ತದೆ. ಪ್ರತೀ ಕ್ವಾರ್ಟರ್ಗೆ ಸರ್ಕಾರ ಬಡ್ಡಿ ಪ್ರಕಟಿಸುತ್ತದೆ. ಸದ್ಯ ಶೇ. 7.1 ಬಡ್ಡಿ ನೀಡಲಾಗುತ್ತಿದೆ.
Pic credit: Google
ಹೇಗಾದರೂ ಕಟ್ಟಿ
ವರ್ಷದಲ್ಲಿ ಯಾವುದೇ ದಿನ ನೀವು ಪಿಪಿಎಫ್ ಅಕೌಂಟ್ಗೆ ಹಣ ಹಾಕಬಹುದು. 12 ಕಂತುಗಳ ಅವಕಾಶ ಇರುತ್ತದೆ.
Pic credit: Google
ವರ್ಗಾವಣೆ ಸಾಧ್ಯ
ಒಂದು ಬ್ಯಾಂಕ್ನಲ್ಲಿ ಪಿಪಿಎಫ್ ಮಾಡಿಸಿದ್ದರೆ ಬೇರೆ ಬ್ಯಾಂಕ್ಗೆ ಅಥವಾ ಪೋಸ್ಟ್ ಆಫೀಸ್ಗೆ ಅದನ್ನು ವರ್ಗಾಯಿಸಬಹುದು.
Pic credit: Google
ಸಾಲ ಸಿಗುತ್ತೆ?
ಹೂಡಿಕೆ ಆರಂಭಿಸಿ 7 ವರ್ಷದ ಬಳಿಕ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು. ಮಧ್ಯದಲ್ಲಿ ಸಾಲ ಪಡೆಯಲೂ ಅವಕಾಶ ಇರುತ್ತದೆ.
Pic credit: Google
ಹಣಕಾಸು ಶಿಸ್ತು
ಪಿಪಿಎಫ್ ಕನಿಷ್ಠ 15 ವರ್ಷ ಅವಧಿಯ ಹೂಡಿಕೆ ಸ್ಕೀಮ್ ಆದ್ದರಿಂದ ಹಣಕಾಸು ಶಿಸ್ತು ಮತ್ತು ಸಂಯಮ ತರುತ್ತದೆ. ದೀರ್ಘಾವಧಿಗೆ ಇದು ಲಾಭದಾಯಕ.
Pic credit: Google
ಈ ವಾರ ಗಮನಿಸಬೇಕಾದ ಅಂಶಗಳು
ಸ್ವಂತವಾಗಿ ಶ್ರೀಮಂತರಾದ ಮಹಿಳೆಯರು
ಅತಿಹೆಚ್ಚು ಸಾಲ ಇರುವ ದೇಶಗಳು