ಇಸ್ರೇಲ್-ಇರಾನ್ ಸಮರದಲ್ಲಿ ಅಮೆರಿಕ ಪ್ರವೇಶವಾಗಿದೆ. ಇರಾನ್ ಪ್ರತೀಕಾರಕ್ಕೆ ಮುಂದಾದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು. ಮಾರುಕಟ್ಟೆಗಳು ಅಲುಗಾಡಬಹುದು.
ಇಸ್ರೇಲ್-ಇರಾನ್ ಯುದ್ಧ
Pic credit: Google
ಯುದ್ಧದ ಕಾರ್ಮೋಡದಲ್ಲೂ ಅಮೆರಿಕದ ಮಾರುಕಟ್ಟೆ ಈ ವಾರ ಕಳೆ ಏರಿಸಿಕೊಂಡಿತು. ವಿವಿಧ ಸೂಚ್ಯಂಕಗಳು ಪಾಸಿಟಿವ್ ಇವೆ. ಇದು ಭಾರತದ ಮಾರುಕಟ್ಟೆಯನ್ನೂ ಪ್ರಭಾವಿಸಬಹುದು.
ಅಮೆರಿಕದ ಮಾರುಕಟ್ಟೆ
Pic credit: Google
ಈ ವಾರ 13 ಐಪಿಒಗಳು ಮಾರುಕಟ್ಟೆಗೆ ಬರುತ್ತಿವೆ. ಒಟ್ಟು 16,000 ಕೋಟಿ ರೂ ಬಂಡವಾಳ ಬೇಡುವಂಥವು. ಹೂಡಿಕೆದಾರರಿಗೆ ವಿವಿಧ ಹೂಡಿಕೆ ಅವಕಾಶ ಸಿಕ್ಕಿದೆ.
ಐಪಿಒಗಳು
Pic credit: Google
ಬಿಎಸ್ಇ ಸೆನ್ಸೆಕ್ಸ್ ಪಟ್ಟಿಯಲ್ಲಿ ಬದಲಾವಣೆ ಆಗುತ್ತಿದೆ. ನೆಸ್ಲೆ, ಇಂಡಸ್ಇಂಡ್ ಬ್ಯಾಂಕ್ ಬದಲು ಟ್ರೆಂಟ್ ಮತ್ತು ಬಿಇಎಲ್ ಸೇರ್ಪಡೆಯಾಗುತ್ತಿವೆ. 30 ಸ್ಟಾಕ್ಗಳ ವೈಟೇಜ್ ಕೂಡ ಬದಲಾಗುತ್ತಿದೆ.
ಸೆನ್ಸೆಕ್ಸ್ ರಚನೆ
Pic credit: Google
ಈ ವಾರ ಎಚ್ಡಿಎಫ್ಸಿ, ವೇದಾಂತ, ಬಜಾಜ್ ಫಿನ್ಸರ್ವ್, ಸಿಪ್ಲಾ ಮೊದಲಾದ ಹಲವು ಕಂಪನಿಗಳಿಂದ ಡಿವಿಡೆಂಡ್, ಸ್ಟಾಕ್ ಸ್ಪ್ಲಿಟ್, ಬೋನಸ್ ಷೇರ್ ಇತ್ಯಾದಿ ಘೋಷಣೆ ಆಗಲಿದೆ.
ಬೋನಸ್, ಡಿವಿಡೆಂಡ್
Pic credit: Google
ಮ್ಯುಚುವಲ್ ಫಂಡ್ನಂತಹ ಸಾಂಸ್ಥಿಕ ಹೂಡಿಕೆಗಳ ಹರಿವು ಎತ್ತ ಸಾಗುತ್ತದೆ ಎಂಬುದು ಮಾರುಕಟ್ಟೆಯನ್ನು ಪ್ರಭಾವಿಸುತ್ತದೆ. ಈ ವಾರ ಏನಾಗುತ್ತೆ ಎಂಬುದು ಗೊತ್ತಿಲ್ಲ.
ಸಾಂಸ್ಥಿಕ ಹೂಡಿಕೆಗಳು
Pic credit: Google
ಈ ವಾರ ಮೊದಲ ನಾಲ್ಕು ದಿನ ಡಾಲರ್ ಎದುರು ಮಂಕಾಗಿದ್ದ ರುಪಾಯಿ ಕರೆನ್ಸಿ ವಾರಾಂತ್ಯದಲ್ಲಿ ಏರಿತ್ತು. ಈ ವಾರ ರೂ ಓಟ ಮುಂದುವರಿದರೆ ಮಾರುಕಟ್ಟೆಗೂ ಚಂದ.
ರುಪಾಯಿ ಡಾಲರ್
Pic credit: Google
ಯುದ್ಧದ ಕಾರ್ಮೋಡದಲ್ಲಿ ಕಚ್ಛಾ ತೈಲ ಬೆಲೆ ಮತ್ತಷ್ಟು ಏರುವ ಭೀತಿ ಇದೆ. ಇದು ಜರುಗಿದಲ್ಲಿ ಹಣದುಬ್ಬರದ ಜೊತೆಗೆ ಮಾರುಕಟ್ಟೆಯನ್ನೂ ಪ್ರಭಾವಿಸಬಲ್ಲುದು.