ಗೋಲ್ಡ್ ಇಟಿಎಫ್, ಚಿನ್ನದಂಥ ಹೂಡಿಕೆ
08 July 2025
Pic credit: Google
By: Vijayasarathy
ಚಿನ್ನ ಉತ್ತಮ
Pic credit: Google
ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಚಿನ್ನವೂ ಒಂದು. ವರ್ಷಕ್ಕೆ ಶೇ. 10ರಿಂದ 18ರಷ್ಟು ಸಿಎಜಿಆರ್ನಲ್ಲಿ ಇದು ಬೆಳೆಯಬಲ್ಲುದು.
ಉತ್ತಮ ಆಯ್ಕೆ
Pic credit: Google
ಭೌತಿಕ ಚಿನ್ನ, ಡಿಜಿಟಲ್ ಚಿನ್ನ ಖರೀದಿಸಬಹುದು. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಲು ಗೋಲ್ಡ್ ಇಟಿಎಫ್ಗಳು ಉತ್ತಮ ಆಯ್ಕೆ.
ಹೂಡಿಕೆ ಸರಳ
Pic credit: Google
ಷೇರು ವಿನಿಮಯ ಕೇಂದ್ರದಲ್ಲಿ ಟ್ರೇಡಿಂಗ್ ಆಗುವ ಗೋಲ್ಡ್ ಫಂಡ್ಗಳನ್ನು ಗೋಲ್ಡ್ ಇಟಿಎಫ್ ಎನ್ನುತ್ತಾರೆ. ಇತರ ಈಕ್ವಿಟಿ ಇಟಿಎಫ್ಗಳಂತೆ ಇದೂ ಕೂಡ ಸರಳ.
ಸುಲಭ ಹೂಡಿಕೆ
Pic credit: Google
ಇಟಿಎಫ್ನಲ್ಲಿ ಹೂಡಿಕೆ ಮಾಡುವುದು ಸಲೀಸು. ಮ್ಯುಚುವಲ್ ಫಂಡ್ಗೆ ಹೋಲಿಸಿದರೆ ಇದರ ಎಕ್ಸ್ಪೆನ್ಸ್ ರೇಶಿಯೋ ನಗಣ್ಯ.
ಡೀಮ್ಯಾಟ್ ಖಾತೆ
Pic credit: Google
ಗೋಲ್ಡ್ ಇಟಿಎಫ್ನಲ್ಲಿ ಹೂಡಿಕೆ ಮಾಡಲು ಡೀಮ್ಯಾಟ್ ಅಕೌಂಟ್ ಹೊಂದಿರಬೇಕು. ಎಷ್ಟು ಮೊತ್ತ ಬೇಕಾದರೂ ಹೂಡಿಕೆ ಮಾಡಲು ಅವಕಾಶ ಇದೆ.
ಟ್ರೇಡಿಂಗ್ ದಿನ
Pic credit: Google
ಷೇರು ಮಾರುಕಟ್ಟೆ ತೆರೆದಿರುವ ದಿನದಂದು ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರೊಳಗೆ ಯಾವಾಗ ಬೇಕಾದರೂ ಇಟಿಎಫ್ನಲ್ಲಿ ಹೂಡಿಕೆ ಮಾಡಬಹುದು.
ಬ್ರೋಕರೇಜ್ ಫೀ
Pic credit: Google
ಗೋಲ್ಡ್ ಇಟಿಎಫ್ನಲ್ಲಿ ಬ್ರೋಕರೇಜ್ ಫೀ ಬಹಳ ಕಡಿಮೆ. ಎಂಟ್ರಿ ಅಥವಾ ಎಕ್ಸಿಟ್ ಲೋಡ್ ಇರೋದಿಲ್ಲ. ಸುಲಭವಾಗಿ ಅದನ್ನು ಮಾರಿ ಹಣ ಪಡೆಬಹುದು.
ಬೇಕಾದಾಗ ಮಾರಿರಿ...
Pic credit: Google
ಚಿನ್ನದ ಬೆಲೆ ಏರಿದಂತೆ ಗೋಲ್ಡ್ ಇಟಿಎಫ್ಗಳ ದರವೂ ಹೆಚ್ಚುತ್ತದೆ. ಚಿನ್ನದ ಬೆಲೆ ಹೆಚ್ಚಿನ ಮಟ್ಟದಲ್ಲಿದೆ ಎನಿಸಿದರೆ ನೀವು ಫಂಡ್ ಹಿಂಪಡೆಯಬಹುದು.
ಭಾರತದ ಬಿಗ್ ಬ್ರ್ಯಾಂಡ್ಸ್
ಶಕ್ತಿಮೀರಿದ ಸಾಲ ಹೊಂದಿದ ದೇಶಗಳು
ಪಿಪಿಎಫ್ ಜನಪ್ರಿಯ ಹೂಡಿಕೆ ಯಾಕೆ?