ಮೋದಿ ನಾಯಕತ್ವದಲ್ಲಿ ಪ್ರಮುಖ ಆರ್ಥಿಕ ಹೆಜ್ಜೆಗಳು
17 Sep 2025
Pic credit: Google
By: Vijayasarathy
ಕ್ರಾಂತಿಕಾರಿ ಕ್ರಮಗಳು
2014ರಿಂದ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ಅನೇಕ ಕ್ರಾಂತಿಕಾರಿ ಕ್ರಮ ತೆಗೆದುಕೊಂಡಿದೆ. ಕೆಲ ಪ್ರಮುಖ ನಿರ್ಧಾರಗಳು ಇಲ್ಲಿವೆ.
Pic credit: Google
ಹಣಕಾಸು ಒಳಗೊಳ್ಳುವಿಕೆ
ಪಿಎಂ ಜನ್ ಧನ್ ಯೋಜನೆ, ಯುಪಿಐ ಮತ್ತು ಮೊಬೈಲ್ ಈ ಮೂರೂ ಕೂಡ ಜನಸಾಮಾನ್ಯರನ್ನು ವ್ಯಾಪಕವಾಗಿ ತಲುಪಿ, ಪ್ರಬಲ ಹಣಕಾಸು ವ್ಯವಸ್ಥೆ ನಿರ್ಮಾಣ ಸಾಧ್ಯವಾಗಿದೆ.
Pic credit: Google
ಸೆಮಿಕಾನ್ ಮಿಷನ್
ಸೆಮಿಕಾನ್ ಇಂಡಿಯಾ ಯೋಜನೆ ಮೂಲಕ, ಜಾಗತಿಕವಾಗಿ ಬಹಳ ಅಗತ್ಯವಾಗಿರುವ ಸೆಮಿಕಂಡಕ್ಟರ್ ಕ್ಷೇತ್ರ ಭಾರತದಲ್ಲಿ ಗಟ್ಟಿಯಾಗಿ ನೆಲಸುವಂತೆ ಪ್ರಯತ್ನಿಸಲಾಗುತ್ತಿದೆ.
Pic credit: Google
ವ್ಯಾಪಾರ ಒಪ್ಪಂದಗಳು
ಜಪಾನ್, ಕೊರಿಯಾ ಇತ್ಯಾದಿ ಹಲವು ದೇಶಗಳೊಂದಿಗೆ ಭಾರತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ದೇಶದ ರಫ್ತು ಹೆಚ್ಚಳದ ಗುರಿಗೆ ಇದು ಪೂರಕವಾಗಿದೆ.
Pic credit: Google
ಕೃಷಿ ಕ್ರಾಂತಿ
ಕೃಷಿ ಬಜೆಟ್ 10 ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಿದೆ. ಎಂಎಸ್ಪಿ ಖರೀದಿ ಮತ್ತು ಎಂಎಸ್ಪಿ ಬೆಲೆ ಹೆಚ್ಚಿದೆ. ಪಿಎಂ ಕಿಸಾನ್ ಇತ್ಯಾದಿ ಯೋಜನೆಗಳು ಕೃಷಿಕರಿಗೆ ವರದಾನವಾಗಿವೆ.
Pic credit: Google
ತಯಾರಿಕಾ ಕ್ರಾಂತಿ
ಮೇಕ್ ಇನ್ ಇಂಡಿಯಾ, ಪಿಎಲ್ಐ ಇತ್ಯಾದಿ ಯೋಜನೆಗಳು ಭಾರತದಲ್ಲಿ ತಯಾರಿಕಾ ಕ್ಷೇತ್ರವನ್ನು ಪೋಷಿಸುತ್ತಿದ್ದು, ಸಾಕಷ್ಟು ಉದ್ಯೋಗಸೃಷ್ಟಿಗೂ ಕಾರಣವಾಗಿವೆ.
Pic credit: Google
ಜಿಎಸ್ಟಿ ಸುಧಾರಣೆ
ಸಂಕೀರ್ಣವಾಗಿದ್ದ ದೇಶದ ಟ್ಯಾಕ್ಸ್ ಸಿಸ್ಟಂ ಅನ್ನು ಬದಲಿಸಿ ಜಿಎಸ್ಟಿ ತಂದಿದ್ದು ದೊಡ್ಡ ಸಾಧನೆ. ಈಗ ಮತ್ತಷ್ಟು ಸರಳಗೊಳಿಸಲಾಗಿದೆ. ತೆರಿಗೆ ಇಳಿಸಲಾಗಿದೆ.
Pic credit: Google
ಆಯುಷ್ಮಾನ್ ಭಾರತ್
ಹಿರಿಯ ನಾಗರಿಕರು ಸೇರಿದಂತೆ ದುರ್ಬಲ ವರ್ಗದ ಜನರಿಗೆ ಉಚಿತವಾಗಿ ಹೆಲ್ತ್ ಇನ್ಷೂರೆನ್ಸ್ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಯೋಜನೆ ರೂಪಿಸಲಾಗಿದೆ.
Pic credit: Google
ಭಾರತದ 8 ಶ್ರೀಮಂತ ಜಿಲ್ಲೆಗಳು
ವಿಕ್ರಮ್ 3201, ಭಾರತದ ಮೊದಲ ಚಿಪ್
ಹೊಸ ಜಿಎಸ್ಟಿ, ಯಾರಿಗೆ ಲಾಭ?