ಹೊಸ ಜಿಎಸ್​ಟಿ ಸಿಸ್ಟಂನಿಂದ ಯಾರಿಗೆ ಲಾಭ?

19 Aug 2025

Pic credit: Google

By: Vijayasarathy

ಸರ್ಕಾರ ಜಿಎಸ್​ಟಿ ವ್ಯವಸ್ಥೆ ಸರಳಗೊಳಿಸಲಿದೆ. ಶೇ. 12, ಶೇ. 28 ಸ್ಲ್ಯಾಬ್ ಇರುವುದಿಲ್ಲ. ಹಲವು ಸರಕುಗಳಿಗೆ ಟ್ಯಾಕ್ಸ್ ಕಡಿಮೆ ಆಗಲಿದೆ. ಇದರಿಂದ ಯಾವ ಸೆಕ್ಟರ್ಸ್​ಗೆ ಹೆಚ್ಚು ಲಾಭ ಆಗಬಹುದು?

ಜಿಎಸ್​ಟಿ ಸುಧಾರಣೆ

Pic credit: Google

ಹೆಚ್ಚಿನ ವಾಹನಗಳಿಗೆ ಶೇ. 28 ಜಿಎಸ್​ಟಿ ಇದೆ. ಇದು ಶೇ. 18ಕ್ಕೆ ಇಳಿಯಬಹುದು. ಹೀಗಾಗಿ, ಆಟೊಮೊಬೈಲ್ ಕಂಪನಿಗಳಿಗೆ ಲಾಭವಾಗಬಹುದು.

ಆಟೊಮೊಬೈಲ್

Pic credit: Google

ಜಿಎಸ್​ಟಿ ಸರಳೀಕರಣದಿಂದ ಸಾಕಷ್ಟು ಸರಕುಗಳಿಗೆ ತೆರಿಗೆ ಇಳಿಕೆಯಾಗುತ್ತದೆ. ಇದರಿಂದ ಅನುಭೋಗ ಹೆಚ್ಚಬಹುದು. ಬ್ಯಾಂಕುಗಳಿಗೆ ಹಣದ ಹರಿವು ಹೆಚ್ಚಬಹುದು.

ಬ್ಯಾಂಕ್

Pic credit: Google

ಸಿಮೆಂಟ್​ಗಳಿಗೆ ಪ್ರಸಕ್ತ ಶೇ. 28ರಷ್ಟು ಜಿಎಸ್​ಟಿ ಇದೆ. ಇದು ಶೇ. 18ಕ್ಕೆ ಇಳಿಯಬಹುದು. ಇದರಿಂದ ಸಿಮೆಂಟ್ ಬೆಲೆ ಶೇ. 7-8ರಷ್ಟು ಇಳಿಯಬಹುದು.

ಸಿಮೆಂಟ್

Pic credit: Google

ಏರ್​ಕಂಡೀಷನರ್​ಗಳಿಗೆ ಜಿಎಸ್​ಟಿ ಶೇ. 28ರಿಂದ 18ಕ್ಕೆ ಇಳಿಯುತ್ತದೆ. ಬಿಸ್ಕತ್ ಇತ್ಯಾದಿ ತಯಾರಿಸುವ ಕಂಪನಿಗಳಿಗೂ ಲಾಭ ಇರಲಿದೆ.

ಕನ್ಸೂಮರ್ ಗೂಡ್ಸ್

Pic credit: Google

ಹಿರಿಯ ನಾಗರಿಕರಿಗಿರುವ ವಿಮಾ ಪಾಲಿಸಿಗಳ ಪ್ರೀಮಿಯಮ್​ಗೆ ಶೇ. 18 ಜಿಎಸ್​ಟಿ ಇದೆ. ಇದು ಶೇ. 5ಕ್ಕೆ ಇಳಿಯಬಹುದು, ಅಥವಾ ವಿನಾಯಿತಿ ಕೂಡ ಪಡೆಯಬಹುದು.

ಇನ್ಷೂರೆನ್ಸ್

Pic credit: Google

ಒಟ್ಟಾರೆ ತೆರಿಗೆ ಇಳಿಕೆಯಿಂದ ಹೆಚ್ಚುವ ಅನುಭೋಗದಿಂದ ಕ್ವಿಕ್ ಕಾಮರ್ಸ್ ಕಂಪನಿಗಳಿಗೂ ಲಾಭ ಆಗಲಿದೆ. ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಲಿದೆ.

ಕ್ವಿಕ್ ಕಾಮರ್ಸ್

Pic credit: Google

ಹೋಟೆಲ್​ಗಳಲ್ಲಿ 7,500 ರೂಗಿಂತ ಕಡಿಮೆ ಸರಾಸರಿ ಬಾಡಿಗೆ ಹಣಕ್ಕೆ ವಿಧಿಸಲುವ ಜಿಎಸ್​ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಬಹುದು. ಇದು ಆ ಉದ್ಯಮಕ್ಕೆ ಪುಷ್ಟಿ ಕೊಡಬಹುದು.

ಹೋಟೆಲ್

Pic credit: Google