ಐಟಿ ರಿಟರ್ನ್ಸ್ ಸಲ್ಲಿಸುವಾಗ ಆಗುವ ತಪ್ಪುಗಳು

03 Aug 2025

Pic credit: Google

By: Vijayasarathy

ತಪ್ಪು ಫಾರ್ಮ್

50 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಸಂಬಳ ಮತ್ತು ಕ್ಯಾಪಿಟಲ್ ಗೇನ್ ಇದ್ದರೆ ಐಟಿಆರ್ ಫಾರ್ಮ್-1 ಅನ್ನು ಆಯ್ದುಕೊಳ್ಳುವಂತಿಲ್ಲ. ಹೆಚ್ಚು ಜನ ತಪ್ಪು ಮಾಡುವುದು ಇಲ್ಲೇ.

Pic credit: Google

ಐಟಿಆರ್ ವೆರಿಫೈ

ಐಟಿ ರಿಟರ್ನ್ ಅನ್ನು ಸಲ್ಲಿಸಿದರೆ ಪ್ರಕ್ರಿಯೆ ಮುಗಿಯುವುದಿಲ್ಲ. ಅದಾದ ಬಳಿಕ ಇ-ವೆರಿಫಿಕೇಶನ್ ಕೂಡ ಮಾಡಿ ಸಲ್ಲಿಸಬೇಕು.

Pic credit: Google

ಅಸೆಸ್ಮೆಂಟ್ ವರ್ಷ

ಬಹಳ ಜನಕ್ಕೆ ಇದು ಗೊಂದಲ ಎನಿಸುತ್ತದೆ. 2024-25ರ ವರ್ಷಕ್ಕೆ ಇನ್ಕಮ್ ಟ್ಯಾಕ್ಸ್ ಕಟ್ಟಿದ್ದೀರೆಂದರೆ ಅದರ ಅಸೆಸ್ಮೆಂಟ್ ವರ್ಷ 2025-26 ಆಗಿರುತ್ತದೆ.

Pic credit: Google

ತಪ್ಪು ವಿವರ

ಹೆಸರು, ವಿಳಾಸ, ಮೇಲ್ ಐಡಿ, ಫೋನ್ ನಂಬರ್, ಪ್ಯಾನ್, ಜನ್ಮ ದಿನಾಂಕ, ಬ್ಯಾಂಕ್ ವಿವರ ಇತ್ಯಾದಿ ಮಾಹಿತಿಯನ್ನು ಎಚ್ಚರದಿಂದ ತುಂಬಬೇಕು.

Pic credit: Google

ಆದಾಯ ಸ್ಪಷ್ಟತೆ

ಒಂದು ವರ್ಷದಲ್ಲಿ ಸಂಬಳ ಮಾತ್ರವಲ್ಲ, ಎಲ್ಲಾ ಆದಾಯವನ್ನೂ ತೋರಿಸಬೇಕು. ಷೇರು ಇತ್ಯಾದಿ ಯಾವುದೇ ಆಸ್ತಿ ಮಾರಿ ಗಳಿಸಿದ ಆದಾಯದ ವಿವರ ನಮೂದಿಸಬೇಕು.

Pic credit: Google

ಎಕ್ಸೆಂಪ್ಷನ್ ಕ್ಲೇಮ್

ಇನ್ಕಮ್ ಟ್ಯಾಕ್ಸ್ ಎಕ್ಸೆಂಪ್ಷನ್ ಕ್ಲೇಮ್ ಮಾಡುತ್ತೀರಿ. ಆದರೆ, 54, 54ಇಸಿ, 54ಎಫ್ ಇತ್ಯಾದಿ ಸೆಕ್ಷನ್ ಅಡಿ ಮಾಡಿದ ಹೂಡಿಕೆಗೆ ಟ್ಯಾಕ್ಸ್ ಎಕ್ಸೆಂಪ್ಷನ್ ಕ್ಲೇಮ್ ಮಾಡಬಹುದು.

Pic credit: Google

ಅಡ್ವಾನ್ಸ್ ಟ್ಯಾಕ್ಸ್

ಕೆಲ ತೆರಿಗೆಗಳನ್ನು ನಿಗದಿತ ಕಾಲಾವಧಿಯೊಳಗೆ ಅಡ್ವಾನ್ಸ್ ಟ್ಯಾಕ್ಸ್ ಆಗಿ ಪಾವತಿಸಬೇಕು. ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. ಐಟಿಆರ್ ಸಲ್ಲಿಸುವ ವೇಳೆ ಇವುಗಳ ರೀಫಂಡ್​ಗೆ ಅವಕಾಶವಿದ್ದರೆ ಬಳಸಬಹುದು.

Pic credit: Google

ನೋಟೀಸ್ ಹುಷಾರ್

ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬಂದರೆ ನಿರ್ಲಕ್ಷಿಸದೆ ಕೂಡಲೇ ಸ್ಪಂದಿಸಿ. ಅಗತ್ಯವಾದ ದಾಖಲೆಗಳನ್ನು ನೀಡಿರಿ. ಇಲ್ಲದಿದ್ದರೆ ಅನವಶ್ಯಕ ದಂಡ, ಶುಲ್ಕ ತೆರಬೇಕಾದೀತು.

Pic credit: Google