ಐದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟಾಗಬಹುದು?

18 Aug 2025

Pic credit: Google

By: Vijayasarathy

ಚಿನ್ನವು ಈಗ ಹೂಡಿಕೆದಾರರಿಗೆ ಫೇವರಿಟ್ ಎನಿಸಿದೆ. ವರ್ಷದಿಂದ ವರ್ಷಕ್ಕೆ ನಿರೀಕ್ಷೆ ಮೀರಿದ ರೀತಿಯಲ್ಲಿ ಬೆಲೆ ಏರುತ್ತಿದೆ. ಹಣ ಹಾಕಿದವರಿಗೆ ಉತ್ತಮ ರಿಟರ್ನ್ ಕೊಡುತ್ತಿದೆ.

ಬಹಳ ಬೆಲೆ

Pic credit: Google

ಚಿನ್ನದ ಬೆಲೆ ಕಳೆದ 20 ವರ್ಷದಲ್ಲಿ ಶೇ. 14ರಷ್ಟು ವಾರ್ಷಿಕ ದರದಲ್ಲಿ ಹೆಚ್ಚುತ್ತಾ ಬಂದಿದೆ. ಕಳೆದ ಐದು ವರ್ಷದಿಂದ ಶೇ. 18ರ ದರದಲ್ಲಿ ಬೆಳೆದಿದೆ.

ಶೇ. 14 ಏರಿಕೆ

Pic credit: Google

ಸದ್ಯ ಅಪರಂಜಿ ಚಿನ್ನದ ಬೆಲೆ ಗ್ರಾಮ್​ಗೆ 10,118 ರೂ ಇದೆ. ಕೆಲವೇ ವರ್ಷಗಳ ಹಿಂದೆ 3,000 ರೂ ಇದ್ದ ಬೆಲೆ ಈಗ 10,000 ರೂ ಮೈಲಿಗಲ್ಲು ದಾಟಿದೆ.

ಕ್ಷಿಪ್ರ ಏರಿಕೆ

Pic credit: Google

ಮುಂದಿನ ಐದು ವರ್ಷದಲ್ಲಿ, ಅಂದರೆ 2030ರಲ್ಲಿ ಚಿನ್ನದ ಬೆಲೆ 20,000 ರೂನಿಂದ 25,000 ರೂವರೆಗೂ ಹೋಗಬಹುದು ಎಂದು ಹಲವು ತಜ್ಞರು ಅಂದಾಜಿಸಿದ್ದಾರೆ.

25,000 ರೂ?

Pic credit: Google

ಬಿಕ್ಕಟ್ಟು, ಅನಿಶ್ಚಿತ ಸಂದರ್ಭಗಳು ಎದುರಾದಾಗ ಹೂಡಿಕೆದಾರರು ಚಿನ್ನವನ್ನು ಆಶ್ರಯಿಸುತ್ತಾರೆ. ಹೀಗಾಗಿ, ಷೇರುಗಳು ಕುಸಿದಾಗ ಚಿನ್ನಕ್ಕೆ ಬೆಲೆ ಹೆಚ್ಚುತ್ತದೆ.

ಬಿಕ್ಕಟ್ಟಿನಲ್ಲಿ ಬೇಕು..

Pic credit: Google

ಆದರೆ, ಭಾರತ, ಚೀನಾದಂತಹ ದೇಶಗಳಲ್ಲಿ ಚಿನ್ನವು ಹೂಡಿಕೆಗೆ ಮಾತ್ರವಲ್ಲ, ಅಲಂಕಾರಕ್ಕೂ ಬಹಳ ಬೇಡಿಕೆಯಲ್ಲಿರುವ ವಸ್ತು.

ಅಲಂಕಾರ, ಹೂಡಿಕೆ

Pic credit: Google

ಚಿನ್ನ ಸೀಮಿತ ಪ್ರಮಾಣದಲ್ಲಿ ಭೂಮಿಯಲ್ಲಿ ಲಭ್ಯ ಇರುವ ಲೋಹವಾಗಿರುವುದರಿಂದ ಅದರ ಬೆಲೆ ಸಹಜವಾಗಿಯೇ ಏರುತ್ತದೆ.

ಸಹಜ ಏರಿಕೆ

Pic credit: Google

ಇವತ್ತು ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಪೇಟಿಎಂ, ಫೋನ್​ಪೇನಂತಹ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಚಿನ್ನ ಖರೀದಿಸಬಹುದು.

ಹೂಡಿಕೆ ಸ್ಥಳ

Pic credit: Google