12 Aug 2025
Pic credit: Google
By: Vijayasarathy
ಸಂಬಳದ ಹಣದಲ್ಲಿ ಕೋಟ್ಯಾಧೀಶ್ವರ ಆಗಲ್ಲ ಎನ್ನುತ್ತಾರೆ. ಆದರೆ, ನಿಯಮಿತ ಸೇವಿಂಗ್ಸ್ ಮತ್ತು ಹೂಡಿಕೆಯಿಂದ ಕೋಟಿ ರೂ ಸಂಪಾದನೆ ಸುಲಭ.
Pic credit: Google
ಆರೋಗ್ಯ ಚೆನ್ನಾಗಿದೆ, ಹೆಲ್ತ್ ಇನ್ಷೂರೆನ್ಸ್ ಬೇಕಿಲ್ಲ ಎಂದು ಯುವಕರು ಹೇಳುವುದುಂಟು. ಆದರೆ, ಕೋವಿಡ್ನಂತಹ ಕಾಯಿಲೆ ವಯಸ್ಸು ಕೇಳಿ ಬರೊಲ್ಲ.
Pic credit: Google
ನಿವೃತ್ತರಾದವರಿಗೆ ಈಕ್ವಿಟಿ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ರಿಸ್ಕಿ ಎನ್ನುತ್ತಾರೆ. ಆದರೆ, ಹಣ ತಕ್ಕಮಟ್ಟಿಗೆ ಬೆಳೆಯಲು ಸ್ವಲ್ಪ ಭಾಗವಾದರೂ ಈಕ್ವಿಟಿಯಲ್ಲಿ ಹೂಡಿಕೆ ಆಗಬೇಕು.
Pic credit: Google
ಹೆಚ್ಚಿನ ಜನರು ಜೀವನೋಪಾಯಕ್ಕೆ ಸಂಬಳದ ಹಣವನ್ನೇ ನಂಬುವುದುಂಟು. ಕೆಲಸ ಹೋದರೆ ಏನಾಗುತ್ತೆ? ಒಂದಕ್ಕಿಂತ ಹೆಚ್ಚು ಆದಾಯ ಮೂಲಗಳಿರುವುದು ಮುಖ್ಯ.
Pic credit: Google
ಬಹಳ ಜನರು ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ರಿಸ್ಕಿ ಅಲ್ಲ ಎನ್ನುತ್ತಾರೆ. ಆದರೆ, ಷೇರುಗಳಲ್ಲಿ ಹೂಡಿಕೆ ಮಾಡಿದರೆ ರಿಸ್ಕ್ ಇದ್ದೇ ಇರುತ್ತದೆ.
Pic credit: Google
ತನಗೆ ತೆರಿಗೆ ಬಾಧ್ಯತೆ ಇಲ್ಲ. ಐಟಿಆರ್ ಸಲ್ಲಿಸುವ ಅಗತ್ಯ ಇಲ್ಲ ಎನ್ನುತ್ತಾರೆ. ಆದರೆ, 3 ಲಕ್ಷ ರೂಗಿಂತ ಹೆಚ್ಚಿನ ಆದಾಯ ಇದ್ದರೆ ರಿಟರ್ನ್ಸ್ ಫೈಲ್ ಮಾಡಬೇಕು.
Pic credit: Google
ಮಕ್ಕಳ ಶಿಕ್ಷಣದ ಜೊತೆಗೆ ಅವರ ಮದುವೆ ಮಾಡಿಸುವ ಹೊರೆಯನ್ನೂ ಪೋಷಕರು ಹೊರುತ್ತಾರೆ. ತಮ್ಮ ಜೀವಮಾನದ ಸಂಪಾದನೆ ವ್ಯಯಿಸಿ ಅತಂತ್ರರಾಗುವುದು ತಪ್ಪು.
Pic credit: Google
ದೀರ್ಘಾವಧಿ ಹೂಡಿಕೆ ಮಾಡಿದರೆ ಬೆಳವಣಿಗೆ ಖಾತ್ರಿ ಎನ್ನುವುದು ತಪ್ಪು. ಭವಿಷ್ಯದಲ್ಲೂ ಬೆಳೆಯುವ ಕ್ಷೇತ್ರಗಳ ಉತ್ತಮ ಷೇರುಗಳನ್ನು ಆಯ್ದುಕೊಳ್ಳುವುದು ಮುಖ್ಯ.
Pic credit: Google