11 Aug 2025

Pic credit: Google

ಸಂಬಳ ಇಲ್ಲ, ಆದರೆ, ಡಿವಿಡೆಂಡ್ ಗಳಿಸುವ ಸಿಇಒಗಳು

By: Vijayasarathy

ಹಲವು ಸಿಇಒಗಳು ಬೇರೆ ಬೇರೆ ಕಾರಣಕ್ಕೆ ಸಂಬಳ ಪಡೆಯೊಲ್ಲ. ಆದರೆ, ಡಿವಿಡೆಂಡ್, ಬೋನಸ್ ಇತ್ಯಾದಿ ಆದಾಯ ಹೊಂದಿರುತ್ತಾರೆ. ಅಂಥ ಕೆಲವರ ಮಾಹಿತಿ...

Pic credit: Google

ಸಂಬಳ ಪಡೆಯಲ್ಲ

ರಿಲಾಯನ್ಸ್ ಇಂಡಸ್ಟ್ರೀಸ್​ನಲ್ಲಿ ಮುಕೇಶ್ ಅಂಬಾನಿ ಶೇ. 50 ಪಾಲು ಹೊಂದಿದ್ದಾರೆ. ಇವರಿಗೆ ವರ್ಷಕ್ಕೆ 3,723 ಕೋಟಿ ರೂ ಡಿವಿಡೆಂಡ್ ಸಿಗುತ್ತದೆ.

Pic credit: Google

ಮುಕೇಶ್ ಅಂಬಾನಿ

ಟಾರೆಂಟ್ ಫಾರ್ಮಾ ಮತ್ತು ಟಾರೆಂಟ್ ಪವರ್ ಸಂಸ್ಥೆಗಳ ಛೇರ್ಮನ್ ಸಮೀರ್ ಮೆಹ್ತಾ 1,959 ಕೋಟಿ ರೂ ಡಿವಿಡೆಂಡ್ ಮತ್ತು 46.50 ಕೋಟಿ ರೂ ಬೋನಸ್ ಪಡೆದಿದ್ದಾರೆ.

Pic credit: Google

ಸಮೀರ್ ಮೆಹ್ತಾ

ಡಾಬರ್ ಇಂಡಿಯಾ ಸಂಸ್ಥೆಯ ಛೇರ್ಮನ್ ಮೋಹಿತ್ ಬರ್ಮನ್ ತಮ್ಮ ಶೇ. 66ರಷ್ಟು ಷೇರುಪಾಲಿನಿಂದ 935.88 ಕೋಟಿ ರೂ ಡಿವಿಡೆಂಡ್ ಪಡೆದಿದ್ದಾರೆ.

Pic credit: Google

ಮೋಹಿತ್ ಬರ್ಮನ್

ಒಬೇರಾಯ್ ರಿಯಾಲ್ಟಿ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯ ಸಿಎಂಡಿ ವಿಕಾಸ್ ಒಬೇರಾಯ್ ಸಂಬಳ ಪಡೆಯಲ್ಲ. ಆದರೆ, ಡಿವಿಡೆಂಡ್ ಮೂಲಕ 170 ಕೋಟಿ ರೂ ಪಡೆದಿದ್ದಾರೆ.

Pic credit: Google

ವಿಕಾಸ್ ಒಬೇರಾಯ್

ಇಂಟರ್​ಗ್ಲೋಬ್ ಏವಿಯೇಶನ್ ಎಂಡಿ ರಾಹುಲ್ ಭಾಟಿಯಾ ಶೂನ್ಯ ಸಂಬಳ ಪಡೆಯುತ್ತಾರಾದರೂ ಡಿವಿಡೆಂಡ್ ಮೂಲಕ ವರ್ಷಕ್ಕೆ 145 ಕೋಟಿ ರೂ ಪಡೆದಿದ್ದಾರೆ.

Pic credit: Google

ರಾಹುಲ್ ಭಾಟಿಯಾ

ದಿವಿಸ್ ಲ್ಯಾಬ್​ನ ಎಂಡಿ ಮುರಳಿ ಕೃಷ್ಣನ್ ದಿವಿ ಅವರು ಡಿವಿಡೆಂಡ್ ಮೂಲಕ 114 ಕೋಟಿ ರೂ ಹಾಗೂ ಬೋನಸ್ ಆಗಿ 88 ಕೋಟಿ ರೂ ಆದಾಯ ಪಡೆದಿದ್ದಾರೆ.

Pic credit: Google

ಮುರಳಿ ಕೃಷ್ಣನ್

ಎಟರ್ನಲ್ ಮುಖ್ಯಸ್ಥರಾದ ದೀಪಿಂದರ್ ಗೋಯಲ್ ಸಂಬಳ ಪಡೆಯಲ್ಲ. ಡಿವಿಡೆಂಡ್ ಆದಾಯವೂ ಇಲ್ಲ. ಆದರೆ, ವೇರಿಯಬಲ್ ಪೇ ಮಾತ್ರ ಗಳಿಸುತ್ತಾರೆ.

Pic credit: Google

ದೀಪಿಂದರ್ ಗೋಯಲ್