ಐಸಿಐಸಿಐ ಬ್ಯಾಂಕ್ ಹೊಸ ಪರಿಷ್ಕೃತ ದರಗಳು

10 Aug 2025

Pic credit: Google

By: Vijayasarathy

ಮಿನಿಮಮ್ ಬ್ಯಾಲನ್ಸ್

Pic credit: Google

ನಗರ ಭಾಗದಲ್ಲಿ ಐಸಿಐಸಿಐನ ಸೇವಿಂಗ್ಸ್ ಅಕೌಂಟ್​ಗಳಲ್ಲಿ ಮಿನಿಮಮ್ ಬ್ಯಾಲನ್ಸ್ 50,000 ರೂ ಇರಬೇಕು. ಗ್ರಾಮೀಣದಲ್ಲಿ 10,000 ರೂ ಬ್ಯಾಲನ್ಸ್ ಇರಬೇಕು.

ಶೇ 6 ದಂಡ

Pic credit: Google

ನಿಯಮ ಪ್ರಕಾರ ಸೇವಿಂಗ್ಸ್ ಅಕೌಂಟ್​ನಲ್ಲಿ ಕನಿಷ್ಠ ಬ್ಯಾಲನ್ಸ್ ಇಲ್ಲದೇ ಹೋದಲ್ಲಿ, ಕೊರತೆಯಾಗುವ ಹಣದ ಮೇಲೆ ಶೇ. 6 ಅಥವಾ 500 ರೂ ದಂಡ ಹಾಕಲಾಗುತ್ತದೆ.

ಟ್ರಾನ್ಸಾಕ್ಷನ್ ಶುಲ್ಕ

Pic credit: Google

ಬ್ಯಾಂಕ್ ಕಚೇರಿಯಲ್ಲಿ ಮಿತಿಗಿಂತ ಹೆಚ್ಚು ಬಾರಿ ಕ್ಯಾಷ್ ವಿತ್​ಡ್ರಾಯಲ್ ಮತ್ತು ಡೆಪಾಸಿಟ್ ಮಾಡಿದರೆ ಪ್ರತೀ ವಹಿವಾಟಿಗೂ 150 ರೂ ಶುಲ್ಕ ವಿಧಿಸಲಾಗುತ್ತದೆ.

ಕಚೇರಿ ಅವಧಿ ಹೊರಗೆ

Pic credit: Google

ರಜೆ ಅಥವಾ ಕಚೇರಿ ಕಾರ್ಯಾವಧಿ ಹೊರಗೆ (ಸಂಜೆ 4:30ರಿಂದ ಬೆಳಗ್ಗೆ 9ರವರೆಗೆ) ರೀಸೈಕ್ಲರ್ ಮಿಷಿನ್​ನಲ್ಲಿ ಕ್ಯಾಷ್ ಡೆಪಾಸಿಟ್ ಮಾಡಿದರೆ 50 ರೂ ಶುಲ್ಕ ಇರುತ್ತದೆ.

ಎಟಿಎಂ ಫೀ

Pic credit: Google

ಐಸಿಐಸಿಐ ಬ್ಯಾಂಕ್​ನದ್ದಲ್ಲದ ಎಟಿಎಂ ಮೆಷೀನ್​ಗಳಲ್ಲಿ ತಿಂಗಳಿಗೆ ಮೂರಕ್ಕಿಂತ ಹೆಚ್ಚು ಬಾರಿ ಹಣ ವಿತ್​ಡ್ರಾ ಮಾಡಿದರೆ ಪ್ರತೀ ವಹಿವಾಟಿಗೆ 23 ರೂ ಶುಲ್ಕ ನೀಡಬೇಕು.

ಚೆಕ್ ರಿಟರ್ನ್ ಶುಲ್ಕ

Pic credit: Google

ಐಸಿಐಸಿಐ ಬ್ಯಾಂಕ್​ನ ಗ್ರಾಹಕರು ಬೇರೆಯವರಿಗೆ ನೀಡಿದ ಚೆಕ್ ರಿಟರ್ನ್ ಬಂದರೆ 500 ರೂ ದಂಡ ಹಾಕಲಾಗುತ್ತದೆ. ಡೆಪಾಸಿಟ್ ಮಾಡಿದ ಹೊರಗಿನ ಚೆಕ್ ಬೌನ್ಸ್ ಆದರೆ 200 ರೂ ದಂಡ.

ಆಟೊಡೆಬಿಟ್ ವಿಫಲ

Pic credit: Google

ಇಎಂಐ, ಇನ್ಷೂರೆನ್ಸ್, ಮ್ಯುಚುವಲ್ ಫಂಡ್ ಇತ್ಯಾದಿಗೆ ಆಟೊಡೆಬಿಟ್ ಕೊಟ್ಟಿದ್ದು, ಹಣದ ಕೊರತೆಯಿಂದ ಡೆಬಿಟ್ ಆಗದೇ ಹೋದಾಗ ಪ್ರತೀ ಬಾರಿ 500 ರೂ ದಂಡ ಹಾಕಲಾಗುತ್ತದೆ.

ಈ ಖಾತೆಗಳಿಗೆ ವಿನಾಯಿತಿ

Pic credit: Google

ಐಸಿಐಸಿಐ ಬ್ಯಾಂಕ್​ನ ಸ್ಯಾಲರಿ ಅಕೌಂಟ್, ಜನ್ ಧನ್ ಅಕೌಂಟ್, ಬೇಸಿಕ್ ಡೆಪಾಸಿಟ್ ಅಕೌಂಟ್​​ಗಳಿಗೆ ಝೀರೋ ಬ್ಯಾಲನ್ಸ್ ಸೌಲಭ್ಯ ಇರುತ್ತದೆ. ಇತರ ದಂಡಗಳಿಂದಲೂ ವಿನಾಯಿತಿ ಇರುತ್ತದೆ.