ಯುಪಿಐನಲ್ಲಿ ಕಳುಹಿಸಿದ ಹಣ ಹೋಗಿಲ್ಲವಾ? ಹೀಗೆ ಮಾಡಿ
05 Aug 2025
Pic credit: Google
By: Vijayasarathy
ಎಲ್ಲಾ ತಂತ್ರಜ್ಞಾನಗಳಲ್ಲೂ ಇರುವಂತೆ ಯುಪಿಐನಲ್ಲೂ ತಾಂತ್ರಿಕ ದೋಷ ಇದ್ದೇ ಇರುತ್ತದೆ. ಕೆಲವೊಮ್ಮೆ ಹಣ ಪಾವತಿಸಿದಾಗ ಅದು ಸ್ವೀಕೃತರಿಗೆ ತಲುಪದೇ ಹೋಗಬಹುದು.
ಪಾವತಿ ವೈಫಲ್ಯ
Pic credit: Google
ಹೆಚ್ಚಿನ ಯುಪಿಐ ಪಾವತಿ ವೈಫಲ್ಯಗಳು ತಾತ್ಕಾಲಿಕವಾಗಿರತ್ತವೆ. ಬ್ಯಾಂಕ್ ಸರ್ವರ್ ಅಥವಾ ಯುಪಿಐ ಸಿಸ್ಟಂ ಸರ್ವರ್ಗಳಲ್ಲಿ ಸಮಸ್ಯೆಯಾಗಿ ಪಾವತಿ ವಿಳಂಬವಾಗಬಹುದು.
ಸರ್ವರ್ ಸಮಸ್ಯೆ
Pic credit: Google
ಸರ್ವರ್ ಸಮಸ್ಯೆಯಾದರೆ 60 ನಿಮಿಷದೊಳಗೆ ಸ್ಪಷ್ಟತೆ ಸಿಗುತ್ತದೆ. ಸ್ವೀಕೃತರಿಗೆ ಹಣ ರವಾನೆಯಾಗುತ್ತದೆ ಅಥವಾ ಕಳುಹಿಸಿದವರ ಖಾತೆಗೆ ಮರಳಿ ಬರುತ್ತದೆ.
60 ನಿಮಿಷದೊಳಗೆ
Pic credit: Google
ಕೆಲವೊಮ್ಮೆ ಹಣ ತಲುಪದೇ ಇದ್ದರೂ ಸೆಂಡರ್ಗಳ ಬ್ಯಾಂಕ್ ಅಕೌಂಟ್ನಿಂದ ಹಣ ಡೆಬಿಟ್ ಆಗಿರುತ್ತದೆ. ಟ್ರಾನ್ಸಾಕ್ಷನ್ ಫೇಲ್ಡ್ ಎಂದಾಗಿರುತ್ತದೆ. ಆಗ ಏನು ಮಾಡಬೇಕು?
ಡೆಬಿಟ್ ಆದಾಗ...
Pic credit: Google
ಒಂದು ಗಂಟೆಯೊಳಗೆ ಹಣ ವಾಪಸ್ ಆಗಬೇಕು. ಆಗದೇ ಹೋದರೆ ಬ್ಯಾಂಕ್ನ ಕಸ್ಟಮರ್ ಸಪೋರ್ಟ್ನಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಬೇಕು.
ಕಸ್ಟಮರ್ ಸಪೋರ್ಟ್
Pic credit: Google
ಯಾವುದೇ ಯುಪಿಐ ಆ್ಯಪ್ನಲ್ಲಿ ದೂರು ದಾಖಲಿಸುವ ಅವಕಾಶ ಇರುತ್ತದೆ. ಅಲ್ಲಿ ಕಂಪ್ಲೇಂಟ್ ನೀಡಬಹುದು. 24 ಗಂಟೆಯೊಳಗೆ ಸಂಬಂಧಿತ ಬ್ಯಾಂಕ್ ಈ ಸಮಸ್ಯೆ ಬಗೆಹರಿಸಬಹುದು.
ಯುಪಿಐ ಆ್ಯಪ್ನಲ್ಲಿ ದೂರು
Pic credit: Google
24 ಗಂಟೆಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸಬೇಕು. ಯುಪಿಐ ಸಂಬಂಧಿತ ದೂರುಗಳನ್ನು ಬ್ಯಾಂಕುಗಳು 3 ದಿನದೊಳಗೆ ಬಗೆಹರಿಸಬೇಕು.
ಬ್ಯಾಂಕ್ ಸಂಪರ್ಕ
Pic credit: Google
ಇಷ್ಟಾದರೂ ಪರಿಹಾರ ಸಿಗದಿದ್ದಾಗ ಎನ್ಪಿಸಿಐನಲ್ಲಿ ದೂರು ನೀಡಬಹುದು. ಅದಾಗಿ 30 ದಿನವಾದರೂ ಪರಿಹಾರ ಸಿಗದಾಗ ಆರ್ಬಿಐ ಬ್ಯಾಂಕಿಂಗ್ ಓಂಬಡ್ಸ್ಮ್ಯಾನ್ ಅನ್ನು ಸಂಪರ್ಕಿಸಬಹುದು.
ಆರ್ಬಿಐ ಓಂಬಡ್ಸ್ಮನ್
Pic credit: Google
ಐಟಿಆರ್ ಸಲ್ಲಿಸುವಾಗ ಆಗುವ ತಪ್ಪುಗಳು
ಕ್ರೆಡಿಟ್ ಕಾರ್ಡ್ ಬಳಸುವ ಟಿಪ್ಸ್
ಆಗಸ್ಟ್ನಲ್ಲಿ ಹೊಸ ಯುಪಿಐ ನಿಯಮಗಳು