ಭಾರತದ 8 ಅತ್ಯಂತ ಶ್ರೀಮಂತ ಜಿಲ್ಲೆಗಳಿವು
22 Aug 2025
Pic credit: Google
By: Vijayasarathy
ಹೈದರಾಬಾದ್ ಗಡಿಭಾಗದ ರಂಗಾರೆಡ್ಡಿ ಜಿಲ್ಲೆಯ ಜಿಡಿಪಿ ತಲಾದಾಯ 11.46 ಲಕ್ಷ ರೂ. ಇದು ದೇಶದ ಅತ್ಯಂತ ಶ್ರೀಮಂತ ಜಿಲ್ಲೆ ಎನಿಸಿದೆ.
1. ರಂಗಾರೆಡ್ಡಿ
Pic credit: Google
ದೆಹಲಿ ಬಳಿ ಇರುವ, ಹರ್ಯಾಣ ರಾಜ್ಯಕ್ಕೆ ಸೇರಿದ ಗುರುಗ್ರಾಮ್ ತಲಾದಾಯ 9.05 ಲಕ್ಷ ರೂ ಇದೆ. ಇಲ್ಲಿ ಐಟಿ ಹಾಗೂ ವಿವಿಧ ಸ್ಟಾರ್ಟಪ್ಗಳಿವೆ.
2. ಗುರುಗ್ರಾಮ್
Pic credit: Google
ಬೆಂಗಳೂರು ನಗರದ ಜಿಡಿಪಿ ತಲಾದಾಯ 8.93 ಲಕ್ಷ ರೂ. ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರಾದ ಇದು ಹಲವು ಉದ್ಯಮಗಳಿಂದ ಸಮೃದ್ಧವಾಗಿದೆ.
3. ಬೆಂಗಳೂರು
Pic credit: Google
ಬಡರಾಜ್ಯ ಉತ್ತರಪ್ರದೇಶದ ಗೌತಮ್ ಬುದ್ಧ ನಗರವು ದೇಶದ 4ನೇ ಅತಿ ಶ್ರೀಮಂತ ಜಿಲ್ಲೆ ಎನಿಸಿದೆ. ಇದರ ತಲಾದಾಯ 8.48 ಲಕ್ಷ ರೂ.
4. ನೋಯ್ಡಾ
Pic credit: Google
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆ ಈ ಪಟ್ಟಿಯಲ್ಲಿರುವ ಅಚ್ಚರಿ ಹೆಸರು. ಇದರ ತಲಾದಾಯ 8.10 ಲಕ್ಷ ರೂ. ಇಲ್ಲಿ ಆಹಾರ ಸಂಸ್ಕರಣೆ, ಫಾರ್ಮಾ ಉದ್ಯಮಗಳು ನೆಲಸಿವೆ.
5. ಸೋಲನ್
Pic credit: Google
ನಾರ್ತ್ ಮತ್ತು ಸೌತ್ ಗೋವಾ ಜಿಲ್ಲೆಯು ಪ್ರವಾಸೋದ್ಯಮದಿಂದ ಸಮೃದ್ಧವಾಗಿದೆ. ಇದರ ತಲಾದಾಯ 7.63 ಲಕ್ಷ ರೂ ಇದೆ.
6. ಗೋವಾ
Pic credit: Google
ಈಶಾನ್ಯ ಭಾರತದಲ್ಲಿರುವ ಸಿಕ್ಕಿಂನ ತಲಾದಾಯ 7.46 ಲಕ್ಷ ರೂ. ಈ ಪುಟ್ಟ ಪ್ರದೇಶಕ್ಕೆ ಪ್ರವಾಸೋದ್ಯಮದ ಬಲ ಇದೆ.
7. ಸಿಕ್ಕಿಂ
Pic credit: Google
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಡಿಪಿ ತಲಾದಾಯ 6.69 ಲಕ್ಷ ರೂ ಇದೆ. ಇದು ಪೋರ್ಟ್ ಹೊಂದಿರುವುದಲ್ಲದೆ ಶಿಕ್ಷಣ ಕ್ಷೇತ್ರದಲ್ಲೂ ಬಲಿಷ್ಠವಾಗಿದೆ.
8. ದಕ್ಷಿಣಕನ್ನಡ
Pic credit: Google
ಹಣದ ಬಗ್ಗೆ ಈ ತಪ್ಪು ಯೋಚನೆ ಬೇಡ
ಪಿಎಂ ಕುಸುಮ್; ಅರ್ಜಿ ಸಲ್ಲಿಸುವ ಕ್ರಮ
ಐದು ವರ್ಷದಲ್ಲಿ ಚಿನ್ನದ ಬೆಲೆ?