Pic credit - Google

Author: Preethi Bhat

Asia Cup 2025: ಟಿ20ಐನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಟಾಪ್ 5 ಬೌಲರ್ಸ್

21 Sep 2025

ಟಾಪ್ T20I ಬೌಲರ್‌ಗಳು

ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ಟಾಪ್ ಐದು ಬೌಲರ್‌ಗಳ ಪಟ್ಟಿ ಇಲ್ಲಿದೆ ನೋಡಿ.

ಅರ್ಷದೀಪ್ ಸಿಂಗ್

ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಭಾರತದ ವೇಗಿ ಅರ್ಷದೀಪ್ ಸಿಂಗ್ ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದು, ಕೇವಲ 64 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ರಿಜ್ವಾನ್ ಬಟ್

ಬಹ್ರೇನ್ ಬೌಲರ್ 66 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, 4 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವನಿಂದು ಹಸ್ರಂಗ

ಶ್ರೀಲಂಕಾದ ಮಣಿಕಟ್ಟಿನ ಸ್ಪಿನ್ನರ್ ವನಿಂದು ಹಸ್ರಂಗ 63 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

ಸಂದೀಪ್ ಲಾಮಿಚಾನೆ

ನೇಪಾಳದ ವೇಗಿ ಸಂದೀಪ್ ಲಾಮಿಚಾನೆ 54 ಪಂದ್ಯಗಳಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ರಶೀದ್ ಖಾನ್

ಮಣಿಕಟ್ಟಿನ ಸ್ಪಿನ್ನರ್ ಅಫ್ಘಾನಿಸ್ತಾನದ ಸ್ಟಾಋ್ ರಶೀದ್ ಖಾನ್ 53 ಪಂದ್ಯಗಳಲ್ಲಿ ಈ ಮೈಲಿಗಲ್ಲು ಪೂರ್ಣಗೊಳಿಸುವ ಮೂಲಕ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.