ಟಿ20ಯಲ್ಲಿ ಕಿಂಗ್ ಕೊಹ್ಲಿ ದಾಖಲೆ ಮುರಿದ ಶುಭ್​ಮನ್ ಗಿಲ್

19 May 2025

Pic credit: Google

 By: ಪೃಥ್ವಿ ಶಂಕರ 

ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿತು.

Pic credit: Google

ಗುಜರಾತ್ ಟೈಟಾನ್ಸ್

ದೆಹಲಿ ನೀಡಿದ 200 ರನ್‌ಗಳ ಗುರಿಯನ್ನು ಗುಜರಾತ್ 19 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಸಾಧಿಸಿತು.

Pic credit: Google

10 ವಿಕೆಟ್ ಜಯ

ಗುಜರಾತ್ ಪರ ಸಾಯಿ ಸುದರ್ಶನ್ 61 ಎಸೆತಗಳಲ್ಲಿ 108 ರನ್ ಗಳಿಸಿದರೆ, ಶುಭ್​ಮನ್ ಗಿಲ್ 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿದರು.

Pic credit: Google

ಸುದರ್ಶನ್- ಗಿಲ್

ಇದರೊಂದಿಗೆ ಶುಭ್​ಮನ್ ಟಿ20 ಕ್ರಿಕೆಟ್‌ನಲ್ಲಿ ಐದು ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದರು. ಟಿ20ಯಲ್ಲಿ ವೇಗವಾಗಿ 5000 ರನ್ ಪೂರೈಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.

Pic credit: Google

5000 ರನ್ ಪೂರ್ಣ

ಪ್ರಿನ್ಸ್ ಎಂದೇ ಜನಪ್ರಿಯರಾಗಿರುವ ಗಿಲ್, 154 ಟಿ20 ಇನ್ನಿಂಗ್ಸ್‌ಗಳಲ್ಲಿ ಐದು ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದರು. ಈ ವಿಷಯದಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು.

Pic credit: Google

ಕೊಹ್ಲಿ ದಾಖಲೆ ಉಡೀಸ್

ಕೊಹ್ಲಿ 167 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದಾರೆ.

Pic credit: Google

ಕೆಎಲ್ ರಾಹುಲ್

ರಾಹುಲ್ 143 ಇನ್ನಿಂಗ್ಸ್‌ಗಳಲ್ಲಿ 5000 ರನ್‌ಗಳನ್ನು ಪೂರ್ಣಗೊಳಿಸಿದ್ದು, ಸುರೇಶ್ ರೈನಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ರೈನಾ 173 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

Pic credit: Google

ಮೊದಲ ಸ್ಥಾನ

ಶುಭ್​ಮನ್ ಗಿಲ್ ಟಿ20 ಮಾದರಿಯಲ್ಲಿ 5000 ರನ್ ಪೂರೈಸಿದ 113ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Pic credit: Google

113ನೇ ಆಟಗಾರ