ಕೊಹ್ಲಿ ಸ್ಥಾನವನ್ನು ತುಂಬುವವರು ಯಾರು? 7 ಆಟಗಾರರ ನಡುವೆ ಪೈಪೋಟಿ

15 May 2025

Pic credit: Google

 By: ಪೃಥ್ವಿ ಶಂಕರ 

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್​ಗೆ ವಿದಾಯ ಹೇಳಿರುವುದರಿಂದ ಮುಂಬರುವ ಇಂಗ್ಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾ ಸಂಕಷ್ಟ ಎದುರಿಸುತ್ತಿದೆ.

Pic credit: Google

ರೋಹಿತ್- ಕೊಹ್ಲಿ

ಹೀಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಈ ಇಬ್ಬರು ಅನುಭವಿ ಆಟಗಾರರ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲದಿದ್ದರೂ, ಯುವ ಆಟಗಾರರ ಹೆಗಲ ಮೇಲಿರುವ ಸವಾಲುಗಳನ್ನು ಗಮನಿಸುವುದು ಅತ್ಯಗತ್ಯವಾಗಿದೆ.

Pic credit: Google

ಯಾರು ಎಂಬ ಪ್ರಶ್ನೆ

ಅದರಲ್ಲೂ ಕೊಹ್ಲಿಯಿಂದ ತೆರವಾದ ನಾಲ್ಕನೇ ಕ್ರಮಾಂಕವನ್ನು ತುಂಬುವುದು ಆಯ್ಕೆದಾರರು ಮತ್ತು ತಂಡದ ನಿರ್ವಹಣೆಗೆ ದೊಡ್ಡ ಸವಾಲಾಗಿದೆ. ಕೊಹ್ಲಿ ಸ್ಥಾನದಲ್ಲಿ ಗಿಲ್ ಬ್ಯಾಟಿಂಗ್ ಮಾಡುವಂತೆ ಜಾಫರ್ ಸಲಹೆ ನೀಡಿದ್ದಾರೆ.

Pic credit: Google

ನಾಲ್ಕನೇ ಕ್ರಮಾಂಕ

ಗಿಲ್ ಹೊರತಾಗಿ, ಕೆಎಲ್ ರಾಹುಲ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಏಕೆಂದರೆ ಇಂಗ್ಲೆಂಡ್ ಪ್ರವಾಸಕ್ಕೆ ಸಾಯಿ ಸುದರ್ಶನ್ ಆಯ್ಕೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ.

Pic credit: Google

ಕೆಎಲ್ ರಾಹುಲ್

 ಜೈಸ್ವಾಲ್ ಅವರೊಂದಿಗೆ ರಾಹುಲ್ ಆರಂಭಿಕರಾಗಿ ಆಡಬೇಕು ಎಂಬುದು ಜಾಫರ್ ಅಭಿಪ್ರಾಯವಾಗಿದೆ. ಬಿಜಿಟಿಯಲ್ಲಿ ಉತ್ತಮವಾಗಿ ಆಡಿದ್ದ ರಾಹುಲ್ ಆರಂಭಿಕರಾಗಿ ಆಡುವುದನ್ನು ಮುಂದುವರಿಸಬೇಕೆಂದು ಹೇಳಿದ್ದಾರೆ.

Pic credit: Google

ರಾಹುಲ್ ಆರಂಭಿಕ

ಗುಜರಾತ್ ಟೈಟಾನ್ಸ್‌ನಲ್ಲಿ ಗಿಲ್ ಜೊತೆ ಆರಂಭಿಕರಾಗಿ ಆಡಿದ್ದ ಸುದರ್ಶನ್, ಐಪಿಎಲ್ 2025 ರಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದು, ಅವರ ತಾಳ್ಮೆಯ ಆಟ ಟೆಸ್ಟ್ ಮಾದರಿಗೆ ಸೂಕ್ತವಾಗಿದೆ ಹೀಗಾಗಿ ಅವರು 3ನೇ ಸ್ಥಾನದಲ್ಲಿ ಆಡಬೇಕು ಎಂದಿದ್ದಾರೆ.

Pic credit: Google

ಸಾಯಿ ಸುದರ್ಶನ್

ಅಲ್ಲದೆ ನಾಲ್ಕನೇ ಕ್ರಮಾಂಕಕ್ಕೆ ಗಿಲ್ ಮತ್ತು ರಾಹುಲ್ ಮಾತ್ರ ಸ್ಪರ್ಧಿಗಳಲ್ಲ. ಅವರಲ್ಲದೆ, ಧ್ರುವ್ ಜುರೆಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ಸ್ಪರ್ಧಿಸುತ್ತಿದ್ದಾರೆ.

Pic credit: Google

ಸರ್ಫರಾಜ್ ಖಾನ್

ಹೀಗಾಗಿ ಈ ಏಳು ಆಟಗಾರರಲ್ಲಿ ಯಾರು ಕೊಹ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾಲವೇ ಹೇಳಬೇಕು.

Pic credit: Google

ಏಳು ಆಟಗಾರರು