ಐಪಿಎಲ್‌ನಲ್ಲಿ ನಾಟೌಟ್ ಶತಕ ಪೂರ್ಣಗೊಳಿಸಿದ ಧೋನಿ

O8 May 2025

Pic credit: Google

 By: ಪೃಥ್ವಿ ಶಂಕರ 

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ತೀರ ಕಳಪೆಯಾಗಿದೆ. ಹೀಗಾಗಿ ತಂಡ ಲೀಗ್​ನಿಂದಲೇ ಹೊರಬಿದ್ದಿದೆ.

ಸಿಎಸ್​ಕೆ ಕಳಪೆ ಪ್ರದರ್ಶನ

Pic credit: Google

ಧೋನಿ ನಾಯಕತ್ವದಲ್ಲೂ ಚೆನ್ನೈ ಪ್ರದರ್ಶನ ಉತ್ತಮವಾಗಿಲ್ಲ. ನಾಯಕನಾಗಿ ಫೇಲ್ ಆದರೂ ಆಟಗಾರನಾಗಿ ಧೋನಿ ವಿಶೇಷ ದಾಖಲೆ ಬರೆದಿದ್ದಾರೆ.

ಧೋನಿ ನಾಯಕತ್ವ

Pic credit: Google

ಕೆಕೆಆರ್ ವಿರುದ್ಧ ಸಿಎಸ್​ಕೆ ತಂಡ ಅಮೋಘ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಧೋನಿ ಅಜೇಯರಾಗಿ ಉಳಿದು ತಂಡವನ್ನು ದಡ ಸೇರಿಸಿದಲ್ಲದೆ ವಿಶೇಷ ಶತಕವನ್ನು ಪೂರ್ಣಗೊಳಿಸಿದರು.

ಕೆಕೆಆರ್ ವಿರುದ್ಧ ಜಯ

Pic credit: Google

ವಾಸ್ತವವಾಗಿ, ಧೋನಿ ಈ ವಿಶಿಷ್ಟ ಶತಕವನ್ನು ಗಳಿಸಿದ್ದು ರನ್ ಗಳಿಸುವ ಮೂಲಕವಲ್ಲ, ಬದಲಾಗಿ ಔಟಾಗದೆ ಉಳಿಯುವ ಮೂಲಕ.

ಧೋನಿ ವಿಶೇಷ ಶತಕ

Pic credit: Google

ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಬಾರಿ, ಅಂದರೆ 100 ಬಾರಿ ಔಟಾಗದೆ ಉಳಿದ ಏಕೈಕ ಬ್ಯಾಟ್ಸ್‌ಮನ್ ಎಂಬ ದಾಖಲೆ ಧೋನಿ ಪಾಲಾಗಿದೆ.

ನಾಟೌಟ್ ಶತಕ

Pic credit: Google

ಮೇ 7 ರಂದು ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ, ಧೋನಿ 18 ಎಸೆತಗಳಲ್ಲಿ 17 ರನ್ ಗಳಿಸಿ ಅಜೇಯರಾಗುಳಿದರು. ಇದು ಐಪಿಎಲ್‌ನಲ್ಲಿ ಧೋನಿ ನಾಟೌಟ್ ಆಗಿದ್ದು 100ನೇ ಬಾರಿ.

18 ಎಸೆತಗಳಲ್ಲಿ 17 ರನ್

Pic credit: Google

ಅದೇ ಪಂದ್ಯದಲ್ಲಿ, ಧೋನಿ ಫೀಲ್ಡಿಂಗ್ ಮಾಡುವಾಗ, ವಿಕೆಟ್ ಕೀಪರ್ ಆಗಿ ಐಪಿಎಲ್‌ನಲ್ಲಿ 200 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದರು.

 200 ವಿಕೆಟ್

Pic credit: Google

ಐಪಿಎಲ್‌ನಲ್ಲಿ 200 ಕ್ಯಾಚ್‌ಗಳನ್ನು ಪಡೆದ ಮೊದಲ ವಿಕೆಟ್‌ಕೀಪರ್ ಧೋನಿ. ಅವರು 270 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮೊದಲ ವಿಕೆಟ್ ಕೀಪರ್

Pic credit: Google