ಕೊಹ್ಲಿ ಕಣ್ತಪ್ಪಿನಿಂದ ನಡೆದ ತಪ್ಪು; ನಟಿ ಅವನೀತ್ ಕೌರ್ಗೆ ಕೋಟಿ ಕೋಟಿ ಲಾಭ
O5 May 2025
Pic credit: Google
By: ಪೃಥ್ವಿ ಶಂಕರ
ನಟಿ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ವಿರಾಟ್ ಕೊಹ್ಲಿ ಆಕಸ್ಮಿಕವಾಗಿ ಲೈಕ್ ಮಾಡಿದ್ದರು.
ವಿರಾಟ್- ಅವನೀತ್
Pic credit: Google
ಈ ತಪ್ಪಿಗೆ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ತುಂಬಾ ಟ್ರೋಲ್ ಮಾಡಿದ್ದರು. ಆ ನಂತರ ಕೊಹ್ಲಿ ಇನ್ಸ್ಟಾಗ್ರಾಮ್ ಮೂಲಕ ಸ್ಪಷ್ಟೀಕರಣವನ್ನು ನೀಡಿದ್ದರು.
ಟ್ರೋಲ್ ಆಗಿದ್ದ ಕೊಹ್ಲಿ
Pic credit: Google
ಕಣ್ತಪ್ಪಿನಿಂದಾಗಿ ನಾನು ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಲೈಕ್ ಮಾಡಿದ್ದೆ ಎಂದು ಕೊಹ್ಲಿ ಸ್ಪಷ್ಟೀಕರಣ ನೀಡಿದ್ದರು.
ಕೊಹ್ಲಿ ಸ್ಪಷ್ಟನೆ
Pic credit: Google
ಆದಾಗ್ಯೂ ಕೊಹ್ಲಿಯ ಈ ತಪ್ಪಿನಿಂದ ಅವನೀತ್‌ಗೆ ಭರ್ಜರಿ ಲಾಭವಾಗಿದೆ. ಕೊಹ್ಲಿ ಆ ಪೋಸ್ಟ್ ಅನ್ನು ಲೈಕ್ ಮಾಡುವ ಮೊದಲು ಅವನೀತ್‌ಗೆ 30 ಮಿಲಿಯನ್ ಫಾಲೋವರ್‌ಗಳಿದ್ದರು. ಅದು ಈಗ 31.8 ಮಿಲಿಯನ್‌ಗೆ ಏರಿದೆ.
ಅವನೀತ್ ಕೌರ್ಗೆ ಲಾಭ
Pic credit: Google
ಮಾಧ್ಯಮ ವರದಿಗಳ ಪ್ರಕಾರ, ಅವನೀತ್ ಅವರ ಒಂದು ಪೋಸ್ಟ್‌ನ ಬೆಲೆಯೂ ಶೇ.30 ರಷ್ಟು ಹೆಚ್ಚಾಗಿದೆ. 2 ಲಕ್ಷ ರೂ.ಗಳಿಂದ 2.6 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ.
ಮೌಲ್ಯ ಹೆಚ್ಚಳ
Pic credit: Google
ಇದರ ಲಾಭ ಪಡೆದುಕೊಂಡ ಅವನೀತ್, ಫೋಟೋಶೂಟ್ ಮತ್ತು ಮ್ಯಾಗಿ ಜಾಹೀರಾತು ಸೇರಿದಂತೆ ಒಟ್ಟು 7 ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅವನೀತ್ ಅವರ ಈ ಪೋಸ್ಟ್‌ಗಳು ಒಟ್ಟು 1.5 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಪಡೆದಿವೆ.
ಅಧಿಕ ಲೈಕ್ಸ್
Pic credit: Google
ಮಾಧ್ಯಮ ವರದಿಗಳ ಪ್ರಕಾರ, ಅವನೀತ್ ಕೌರ್ ಸಾಕಷ್ಟು ಬ್ರಾಂಡ್ ಅನುಮೋದನೆಗಳನ್ನು ಪಡೆಯುತ್ತಿದ್ದು, ಕಳೆದ 72 ಗಂಟೆಗಳಲ್ಲಿ, ಸೌಂದರ್ಯ, ಫ್ಯಾಷನ್ ಮತ್ತು ಫಿನ್‌ಟೆಕ್ ಸೇರಿದಂತೆ 12 ಬ್ರಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.
12 ಬ್ರ್ಯಾಂಡ್ಸ್
Pic credit: Google
ಈ ಒಪ್ಪಂದಗಳಿಂದಾಗಿ ಅವನೀತ್ ಕೌರ್ ಅವರ ಸಂಪತ್ತು 41 ಕೋಟಿ ರೂ.ಗಳಿಗೂ (5 ಮಿಲಿಯನ್ ಡಾಲರ್) ಹೆಚ್ಚಾಗಿದ್ದು, ಈ ಮೂಲಕ ಅವರು ಕೋಟ್ಯಂತರ ರೂಪಾಯಿಗಳನ್ನು ಗಳಿಸಿದ್ದಾರೆ.