IPL 2025: ಒಂದು ಪಂದ್ಯವನ್ನಾಡಲು 5.5 ಕೋಟಿ ರೂ. ವೇತನ ಪಡೆದ ಮಯಾಂಕ್

16 May 2025

Pic credit: Google

 By: ಪೃಥ್ವಿ ಶಂಕರ 

ಐಪಿಎಲ್ 2025 ರ ನಡುವೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರನೊಬ್ಬ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

Pic credit: Google

ಮಯಾಂಕ್ ಯಾದವ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ವೇಗಿ ಮಯಾಂಕ್ ಯಾದವ್ ಮತ್ತೊಮ್ಮೆ ಗಾಯಗೊಂಡಿದ್ದು, ಇದರಿಂದಾಗಿ ಅವರು ಉಳಿದ ಪಂದ್ಯಗಳಲ್ಲಿ ತಂಡದ ಭಾಗವಾಗಿರುವುದಿಲ್ಲ.

Pic credit: Google

ಮತ್ತೊಮ್ಮೆ ಗಾಯ

ಬೆನ್ನು ನೋವಿನಿಂದಾಗಿ ಮಯಾಂಕ್ ಯಾದವ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ನ್ಯೂಜಿಲೆಂಡ್‌ನ ಯುವ ವೇಗಿ ವಿಲ್ ಒ'ರೂರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Pic credit: Google

ವಿಲ್ ಒ'ರೂರ್ಕ್

ಈ ಸೀಸನ್‌ನಲ್ಲಿ ಮಯಾಂಕ್ ಯಾದವ್ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದು, ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದರು.

Pic credit: Google

ಕೇವಲ 2 ಪಂದ್ಯ

ಲಕ್ನೋ ಸೂಪರ್ ಜೈಂಟ್ಸ್ ತಂಡವು ಮಯಾಂಕ್ ಯಾದವ್ ಅವರನ್ನು 11 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಂಡಿತ್ತು. ಇದರರ್ಥ ಮಯಾಂಕ್ ಒಂದು ಪಂದ್ಯಕ್ಕೆ 5.5 ಕೋಟಿ ರೂ. ವೇತನ ಪಡೆದಿದ್ದಾರೆ.

Pic credit: Google

11 ಕೋಟಿ ರೂ.

ಕಳೆದ ಸೀಸನ್‌ನಲ್ಲೂ ಮಯಾಂಕ್ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಆ ವೇಳೆ ಆಡಿದ್ದ 4 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದರು. ಆದರೆ, ಕಳೆದ ಸೀಸನ್‌ನಲ್ಲಿ ಅವರ ಸಂಬಳ ಕೇವಲ 20 ಲಕ್ಷ ರೂ.ಗಳಾಗಿತ್ತು.

Pic credit: Google

ಕೇವಲ 20 ಲಕ್ಷ

ಮಯಾಂಕ್ ಯಾದವ್ ಕಳೆದ ವರ್ಷ ಟೀಮ್ ಇಂಡಿಯಾ ಪರ ಟಿ20 ಮಾದರಿಯಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ ಗಾಯದ ಕಾರಣದಿಂದಾಗಿ ಅವರು ಟೀಂ ಇಂಡಿಯಾದ ಭಾಗವಾಗಲು ಸಾಧ್ಯವಾಗುತ್ತಿಲ್ಲ.

Pic credit: Google

ಟೀಮ್ ಇಂಡಿಯಾ