ವೈಭವ್ ತೋಳ್ಬಲಕ್ಕೆ ಘಟಾನುಘಟಿಗಳ ದಾಖಳೆಗಳೆಲ್ಲ ಉಡೀಸ್

23 May 2025

Pic credit: Google

 By: ಪೃಥ್ವಿ ಶಂಕರ 

14 ವರ್ಷದ ವೈಭವ್ ಈ ಐಪಿಎಲ್ ಸೀಸನ್‌ನಲ್ಲಿ ಪಾದಾರ್ಪಣೆ ಮಾಡಿ ಕೇವಲ 7 ಪಂದ್ಯಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.

Pic credit: Google

ವೈಭವ್ ಸೂರ್ಯವಂಶಿ

ಪಂದ್ಯದಿಂದ ಪಂದ್ಯಕ್ಕೆ ತಮ್ಮ ಬ್ಯಾಟಿಂಗ್​ನಲ್ಲಿ ಸುಧಾರಣೆ ತಂದಿರುವ ವೈಭವ್ ಸೂರ್ಯವಂಶಿ ತಮ್ಮ ಹೊಡಿಬಡಿ ಆಟದ ಮೂಲಕ ಘಟಾನುಘಟಿಗಳನ್ನೇ ಹಿಂದಿಕ್ಕಿದ್ದಾರೆ.

Pic credit: Google

ಹೊಡಿಬಡಿ ಆಟ

ಕೇವಲ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ ವೈಭವ್, ಈ ಸೀಸನ್‌ನಲ್ಲಿ ಆಡಿದ 7 ಪಂದ್ಯಗಳಲ್ಲಿ 36 ಸರಾಸರಿಯಲ್ಲಿ 252 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ.

Pic credit: Google

35 ಎಸೆತಗಳಲ್ಲಿ ಶತಕ

ಆದರೆ ಅತ್ಯಂತ ವಿಶೇಷವಾದ ವಿಷಯವೆಂದರೆ ವೈಭವ್ ಅವರ ಸ್ಟ್ರೈಕ್ ರೇಟ್, ಇದು ಈ ಸೀಸನ್‌ನಲ್ಲಿ ಇತರ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗಿಂತ ಹೆಚ್ಚಾಗಿದೆ.

Pic credit: Google

ಸ್ಟ್ರೈಕ್ ರೇಟ್

ವೈಭವ್ ಈ 252 ರನ್‌ಗಳನ್ನು 206.55 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಕಲೆಹಾಕಿದ್ದಾರೆ. ಇದು 20 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳನ್ನು ಆಡಿದ ಇತರ 97 ಬ್ಯಾಟ್ಸ್‌ಮನ್‌ಗಳಿಗಿಂತ ಹೆಚ್ಚಾಗಿದೆ.

Pic credit: Google

206.55 ರ ಸ್ಟ್ರೈಕ್ ರೇಟ್‌

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಇದ್ದಾರೆ, ಅವರ ಸ್ಟ್ರೈಕ್ ರೇಟ್ 197.82 ಆಗಿದೆ.

Pic credit: Google

ನಿಕೋಲಸ್ ಪೂರನ್

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಫಿನಿಶರ್ ಟಿಮ್ ಡೇವಿಡ್ ಇಲ್ಲಿಯವರೆಗೆ 193.75 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದು ಮೂರನೇ ಸ್ಥಾನದಲ್ಲಿದ್ದಾರೆ.

Pic credit: Google

ಟಿಮ್ ಡೇವಿಡ್