ದಿನೇಶ್ ಕಾರ್ತಿಕ್ ಹುಟ್ಟುಹಬ್ಬ: ಭಾರತೀಯ ಕ್ರಿಕೆಟ್‌ನ ‘ಫೀನಿಕ್ಸ್’

01 June 2025                                    Author: Vinay Bhat

Pic credit - Google

ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರಿಗೆ ಇಂದು 40ನೇ ಹುಟ್ಟುಬ್ಬ. ಇವರು ಜೂನ್ 1, 1985 ರಂದು ಚೆನ್ನೈನಲ್ಲಿ ಜನಿಸಿದರು.

ದಿನೇಶ್ ಕಾರ್ತಿಕ್

2004 ರಲ್ಲಿ ತಮ್ಮ 19 ನೇ ವಯಸ್ಸಿನಲ್ಲಿ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಇವರಿಗೆ ಸಿಕ್ಕಿತು. 2004 ರಲ್ಲಿ ಮೈಕೆಲ್ ವಾನ್ ಅವರನ್ನು ಸ್ಟಂಪ್ ಔಟ್ ಮಾಡಿ ವಿಕೆಟ್ ಕೀಪರ್ ಆಗಿ ಮೊದಲ ವಿಕೆಟ್ ಪಡೆದರು.

19ನೇ ವಯಸ್ಸಿನಲ್ಲಿ ಪಾದಾರ್ಪಣೆ

2004 ರಲ್ಲಿ ಭಾರತದ ಮೊದಲ T20I ಪಂದ್ಯದಲ್ಲೂ ಕಾರ್ತಿಕ್ ಆಡಿದ್ದರು. ಕುತೂಹಲಕಾರಿಯಾಗಿ, ಆ ಪಂದ್ಯದಲ್ಲಿ ಅವರು ಪಂದ್ಯಶ್ರೇಷ್ಠರೂ ಆಗಿದ್ದರು.

ಪಂದ್ಯ ಪುರುಷೋತ್ತಮ

ಕಾರ್ತಿಕ್ 2004-2006 ರ ನಡುವೆ ಭಾರತ ಪರ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದರು, ಆದರೆ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಪಾದಾರ್ಪಣೆ

ಎಂಎಸ್ ಧೋನಿ ಆಗಮನದ ನಂತರ, ಅವರು ಭಾರತ ತಂಡದ ಪರ್ಯಾಯ ವಿಕೆಟ್ ಕೀಪರ್ ಆದರು. ಬಳಿಕ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಆದರೆ ಇದರ ಹೊರತಾಗಿಯೂ, ಅವರು ಮತ್ತೆ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾದರು.

ಎಂಎಸ್ ಧೋನಿ ಆಗಮನ

ಅವರು 2007 ರ ಟಿ 20 ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು. ಕಾರ್ತಿಕ್ 2019 ರ ODI ವಿಶ್ವಕಪ್ ಮತ್ತು 2021 ರ T20 ವಿಶ್ವಕಪ್‌ನಲ್ಲೂ ಆಡಿದ್ದರು.

ಐಸಿಸಿ ಪಂದ್ಯಾವಳಿ

ಅವರು 26 ಟೆಸ್ಟ್ ಪಂದ್ಯಗಳಲ್ಲಿ 1025 ರನ್, 94 ಏಕದಿನ ಪಂದ್ಯಗಳಲ್ಲಿ 1752 ರನ್ ಮತ್ತು 60 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 686 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ 180 ಪಂದ್ಯಗಳಲ್ಲಿ 126 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಂತರರಾಷ್ಟ್ರೀಯ ವೃತ್ತಿಜೀವನ

ಐಪಿಎಲ್ 2024 ರ ನಂತರ ಕಾರ್ತಿಕ್ ಕ್ರಿಕೆಟ್‌ನಿಂದ ನಿವೃತ್ತರಾದರು. ಐಪಿಎಲ್‌ನಲ್ಲಿ ಕಾರ್ತಿಕ್ 257 ಪಂದ್ಯಗಳಲ್ಲಿ 4842 ರನ್ ಗಳಿಸಿದ್ದರು. ವಿಕೆಟ್ ಕೀಪರ್ ಆಗಿ ಅವರು 174 ವಿಕೆಟ್‌ಗಳನ್ನು ಪಡೆದಿದ್ದಾರೆ.

ಐಪಿಎಲ್ ವೃತ್ತಿಜೀವನ