ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಮತ್ತು ವಿಕೆಟ್ ಗಳಿಸಿದ ಭಾರತೀಯ ಆಟಗಾರರು
10 June 2025 Author: Vinay Bhat
Pic credit - Google
ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಸ್ಥಾನದಲ್ಲಿ ಮೊದಲಿಗರಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇದ್ದಾರೆ. ಇವರು 17 ಪಂದ್ಯಗಳಲ್ಲಿ 1575 ರನ್ ಗಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್
ರಾಹುಲ್ ದ್ರಾವಿಡ್ ಇಂಗ್ಲೆಂಡ್‌ನಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1376 ರನ್ ಗಳಿಸಿದ್ದಾರೆ. ಸುನಿಲ್ ಗವಾಸ್ಕರ್ ಇಂಗ್ಲೆಂಡ್‌ನಲ್ಲಿ ಆಡಿದ 16 ಟೆಸ್ಟ್‌ಗಳಲ್ಲಿ 1152 ರನ್ ಗಳಿಸಿದ್ದಾರೆ.
ರಾಹುಲ್ ದ್ರಾವಿಡ್
ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ 17 ಟೆಸ್ಟ್‌ಗಳಲ್ಲಿ 1096 ರನ್ ಗಳಿಸಿದ್ದಾರೆ. ದಿಲೀಪ್ ವೆಂಗ್‌ಸರ್ಕಾರ್ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 960 ರನ್‌ಗಳನ್ನು ಗಳಿಸಿದ್ದಾರೆ.
ವಿರಾಟ್ ಕೊಹ್ಲಿ
ಸೌರವ್ ಗಂಗೂಲಿ ಇಂಗ್ಲೆಂಡ್‌ನಲ್ಲಿ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 65.35 ಸರಾಸರಿಯಲ್ಲಿ 915 ರನ್ ಗಳಿಸಿದ್ದಾರೆ. ಚೇತೇಶ್ವರ ಪೂಜಾರ 16 ಟೆಸ್ಟ್‌ಗಳಲ್ಲಿ 870 ರನ್ ಗಳಿಸಿದ್ದಾರೆ.
ಸೌರವ್ ಗಂಗೂಲಿ
ಇನ್ನು ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್ಗಳನ್ನು ನೋಡುವುದಾದರೆ ಇಶಾಂತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಇವರು 22 ಇನ್ನಿಂಗ್ಸ್‌ಗಳಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅತಿ ಹೆಚ್ಚು ಟೆಸ್ಟ್ ವಿಕೆಟ್
ಈ ಪಟ್ಟಿಯಲ್ಲಿ ಮುಂದಿನವರು ಕಪಿಲ್ ದೇವ್. ಇವರು 22 ಇನ್ನಿಂಗ್ಸ್‌ಗಳಲ್ಲಿ 43 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಕಪಿಲ್ ದೇವ್
ಜಸ್ಪ್ರೀತ್ ಬುಮ್ರಾ 15 ಇನ್ನಿಂಗ್ಸ್‌ಗಳಲ್ಲಿ 37 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ 19 ಇನ್ನಿಂಗ್ಸ್‌ಗಳಲ್ಲಿ 36 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಜಸ್ಪ್ರೀತ್ ಬುಮ್ರಾ
ಈ ಪಟ್ಟಿಯಲ್ಲಿ ಮುಂದಿನ ಸ್ಥಾನ ದಂತಕಥೆ ಬೌಲರ್ ಬಿಷನ್ ಸಿಂಗ್ ಬೇಡಿ ಅವರಿದ್ದಾರೆ. ಬಿಷನ್ ಬೇಡಿ 18 ಇನ್ನಿಂಗ್ಸ್‌ಗಳಲ್ಲಿ 35 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಬಿಷನ್ ಸಿಂಗ್ ಬೇಡಿ
ಇಂಗ್ಲೆಂಡ್‌ನಲ್ಲಿ 21 ಇನ್ನಿಂಗ್ಸ್‌ಗಳಲ್ಲಿ 34 ವಿಕೆಟ್‌ಗಳನ್ನು ಪಡೆದು ಮೊಹಮ್ಮದ್ ಶಮಿ ಆರನೇ ಸ್ಥಾನದಲ್ಲಿದ್ದಾರೆ. ಆದರೆ, ಮುಂಬರುವ ಸರಣಿಯಲ್ಲಿ ಶಮಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ.