IND vs ENG Test: ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ಭಾರತೀಯ ನಾಯಕ

18 June 2025                                    Author: Vinay Bhat

Pic credit - Google

ಜೂನ್ 20 ರಿಂದ ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದೆ. ಉಭಯ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ, ಭಾರತ ತಂಡದ ನಾಯಕತ್ವ ಶುಭ್​ಮನ್ ಗಿಲ್ ಅವರ ಕೈಯಲ್ಲಿರುತ್ತದೆ.

ಭಾರತ-ಇಂಗ್ಲೆಂಡ್ ಸರಣಿ

ಶುಭ್​ಮನ್ ಗಿಲ್ ಮೊದಲ ಬಾರಿಗೆ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲರ ಕಣ್ಣುಗಳು ಅವರ ನಾಯಕತ್ವದ ಮೇಲೆ ಇದೆ.

ಗಿಲ್ ನಾಯಕತ್ವದ ಮೇಲೆ ಕಣ್ಣು

ಇಂಗ್ಲೆಂಡ್ ದೇಶದಲ್ಲಿ ಟೆಸ್ಟ್ ಗೆಲ್ಲುವುದು ಭಾರತೀಯ ನಾಯಕರಿಗೆ ದೊಡ್ಡ ಸವಾಲಾಗಿದೆ. ಈ ಹಿಂದೆ ಕೂಡ ಇದು ಅನೇಕ ಬಾರಿ ಸಾಬೀತಾಗಿದೆ.

ಗೆಲುವು ಸುಲಭಲ್ಲ

ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕ ವಿರಾಟ್ ಕೊಹ್ಲಿ. ವಿರಾಟ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ 3 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.

ವಿರಾಟ್ ಅತ್ಯಂತ ಯಶಸ್ವಿ ನಾಯಕ

2018 ರ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದರು. ಇದಾದ ನಂತರ, 2022 ರ ಪ್ರವಾಸದಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳನ್ನು ಗೆಲ್ಲುವಂತೆ ಮಾಡಿದರು.

3 ಟೆಸ್ಟ್‌ಗಳಲ್ಲಿ ಗೆಲುವು

ಈ ಪಟ್ಟಿಯಲ್ಲಿರುವ ಎರಡನೇ ನಾಯಕ ದಂತಕಥೆ ಕಪಿಲ್ ದೇವ್. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ 2 ಟೆಸ್ಟ್ ಪಂದ್ಯಗಳನ್ನು ಗೆದ್ದಿತು.

ಕಪಿಲ್ ದೇವ್ 2ನೇ ಸ್ಥಾನ

ಭಾರತದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಅವರ ಇಂಗ್ಲೆಂಡ್ ಪ್ರವಾಸದ ಪ್ರದರ್ಶನ ಉತ್ತಮವಾಗಿಲ್ಲ. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಇಲ್ಲಿ ಕೇವಲ 1 ಟೆಸ್ಟ್ ಪಂದ್ಯವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು.

ಧೋನಿ ಖಾತೆಯಿಂದ ಕೇವಲ 1 ಗೆಲುವು

ಇವರಲ್ಲದೆ, ಸೌರವ್ ಗಂಗೂಲಿ, ಅಜಿತ್ ವಾಡೇಕರ್ ಮತ್ತು ರಾಹುಲ್ ದ್ರಾವಿಡ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ 1-1 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.

ಈ ನಾಯಕರ ಹೆಸರೂ ಸಹ ಸೇರಿವೆ