IPL 2025, CSK: ಚೆನ್ನೈನ ಚೆಪಾಕ್ ಕ್ರೀಡಾಂಗಣದ ನಿಜವಾದ ಹೆಸರೇನು ಗೊತ್ತೇ?

Pic Credit: Google

By Vinay Bhat

28 April 2025

ಚೆಪಾಕ್ ಕ್ರೀಡಾಂಗಣ, ಚೆನ್ನೈನಲ್ಲಿರುವ ಈ ಚೆಪಾಕ್ ಕ್ರೀಡಾಂಗಣವನ್ನು 1916 ರಲ್ಲಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಈ ಮೈದಾನದ ಹೆಸರು ಮದ್ರಾಸ್ ಕ್ರಿಕೆಟ್ ಕ್ಲಬ್ ಮೈದಾನ ಎಂದಾಗಿತ್ತು.

ಈ ಮೈದಾನದಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು 1934 ರಲ್ಲಿ ಆಡಲಾಯಿತು. ಆಗ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು.

ಇದಾದ ನಂತರ, 1986 ರಲ್ಲಿ ಈ ಮೈದಾನದ ಹೆಸರನ್ನು ಬದಲಾಯಿಸಲಾಯಿತು.

ಈ ಮೈದಾನಕ್ಕೆ ಬಿಸಿಸಿಐ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಂ. ಎ. ಚಿದಂಬರಂ ಅವರ ಹೆಸರನ್ನು 1986 ರಲ್ಲಿ ಇಡಲಾಯಿತು.

ಎಂ.ಎ. ಚಿದಂಬರಂ ಕ್ರೀಡಾಂಗಣವು ಚೆಪಾಕ್‌ನ ನಿಜವಾದ ಹೆಸರು ಆಗಿದೆ.

2008 ರಿಂದ ಈ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

ಸದ್ಯ ಐಪಿಎಲ್ 2025 ರಲ್ಲಿ ಎಂಎಸ್ ಧೋನಿ ನಾಯಕನಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನ ಎಂ. ಎ. ಚಿದಂಬರಂ ಸ್ಟೇಡಿಯಂ ಆಗಿದೆ.

ಈ ಮೈದಾನವು ಸುಮಾರು 50 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಥಿತಿ ಚೆನ್ನಾಗಿಲ್ಲ. ಆಡಿದ 9 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಜಯ ಮತ್ತು ಏಳರಲ್ಲಿ ಸೋಲು ಕಂಡು 4 ಅಂಕ ಪಡೆದು ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.