IPL 2025: ಒಂದು ಐಪಿಎಲ್ ಪಂದ್ಯದಿಂದ ಅಂಪೈರ್‌ಗಳು ಎಷ್ಟು ಹಣ ಗಳಿಸುತ್ತಾರೆ?
28 April 2025 Author: Vinay Bhat
Pic credit - Google
ಐಪಿಎಲ್ ಪಂದ್ಯ ಎಂದ ಮೇಲೆ ಅಲ್ಲಿ ತುಂಬಾ ಒತ್ತಡ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒಂದು ತಪ್ಪು ನಿರ್ಧಾರವು ಇಡೀ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಪಂದ್ಯವನ್ನು ನ್ಯಾಯಯುತವಾಗಿ ಮಾಡುವಲ್ಲಿ ಅಂಪೈರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ.
ಐಪಿಎಲ್ನಲ್ಲಿ ಅಂಪೈರ್‌ಗಳು
ಪ್ರತಿ ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲಿರುವ ಅಂಪೈರ್ ನಿಂದ ನಾಲ್ಕನೇ ಅಂಪೈರ್ ವರೆಗೆ ಒಂದು ಪಂದ್ಯದಿಂದ ಎಷ್ಟು ಸಂಪಾದಿಸುತ್ತಾರೆಂದು ನಿಮಗೆ ತಿಳಿದಿದೆಯೇ?. ಈ ಕುರಿತ ಮಾಹಿತಿ ಇಲ್ಲಿದೆ.
ಅಂಪೈರ್‌ಗಳ ಸ್ಯಾಲರಿ ಎಷ್ಟು?
ವರದಿಗಳ ಪ್ರಕಾರ, ಐಪಿಎಲ್ 2025 ರಲ್ಲಿ ಆನ್-ಫೀಲ್ಡ್ ಅಂಪೈರ್‌ಗಳಿಗೆ ಪ್ರತಿ ಪಂದ್ಯಕ್ಕೆ 3 ಲಕ್ಷ ರೂ. ಗಳನ್ನು ನೀಡಲಾಗುತ್ತಿದೆ. ಬೇರೆ ದೇಶಗಳ ಲೀಗ್ ಪಂದ್ಯಗಳಿಗೆ ಹೋಲಿಸಿದರೆ ಇದು ಒಳ್ಳೆಯ ಸಂಬಳ ಎನ್ನಲಾಗಿದೆ.
ಮೈದಾನದಲ್ಲಿರುವ ಅಂಪೈರ್ ಸಂಬಳ
ನಾಲ್ಕನೇ ಅಂಪೈರ್ ಅಂದರೆ ಫೀಲ್ಡ್ ಅಂಪೈರ್‌ಗಳಿಗೆ ಗೊಂದಲವಿದ್ದ ನಿರ್ಧಾರವನ್ನು ತೆಗೆದುಕೊಳ್ಳಲು ಅಥವಾ ರಿವ್ಯೂ ಕೇಳಿದಾಗ ತಿಳಿಸಲು ಇರುವ ಫೋರ್ತ್ ಅಂಪೈರ್‌ಗಳು ಪ್ರತಿ ಪಂದ್ಯಕ್ಕೂ ಸುಮಾರು 2 ಲಕ್ಷ ರೂಪಾಯಿ ಶುಲ್ಕ ಪಡೆಯುತ್ತಿದ್ದಾರೆ.
ಫೋರ್ತ್ ಅಂಪೈರ್ ಗಳಿಕೆಗಳು:
ಐಸಿಸಿ ಪ್ಯಾನೆಲ್‌ನಲ್ಲಿರುವ ಎಲೈಟ್ ಅಂಪೈರ್‌ಗಳು ಒಂದು ಐಪಿಎಲ್ ಪಂದ್ಯಕ್ಕೆ 3.7 ಲಕ್ಷ ರೂ. ಶುಲ್ಕ ವಿಧಿಸುತ್ತಿದ್ದಾರೆ.
ಎಲೈಟ್ ಅಂಪೈರ್ ಶುಲ್ಕಗಳು
ಡೆವಲಪ್ಮೆಂಟ್ ಅಂಪೈರ್‌ಗಳಿಗೆ ಪ್ರತಿ ಪಂದ್ಯಕ್ಕೆ ಸುಮಾರು 60,000 ರೂ. ಶುಲ್ಕ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಡೆವಲಪ್ಮೆಂಟ್ ಅಂಪೈರ್‌ಗಳ ಶುಲ್ಕಗಳು
ಪ್ಲೇ ಆಫ್ ಮತ್ತು ಫೈನಲ್ ನಲ್ಲಿ ಅಂಪೈರಿಂಗ್ ಮಾಡಿದ್ದಕ್ಕಾಗಿ ಎಲೈಟ್ ಅಂಪೈರ್‌ಗಳು 8.2 ಲಕ್ಷ ರೂ. ಬೋನಸ್ ಮೊತ್ತವನ್ನು ಪಡೆಯುತ್ತಾರೆ.
ಪ್ಲೇಆಫ್‌ಗಳು- ಫೈನಲ್‌ಗಳಲ್ಲಿ ಬೋನಸ್‌ಗಳು
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ 46 ಪಂದ್ಯಗಳು ಮುಕ್ತಾಯಗೊಂಡಿವೆ. ನಿನ್ನೆ ಆರ್ಸಿಬಿ ಮತ್ತು ಡೆಲ್ಲಿ ನಡುವೆ ಪಂದ್ಯ ನಡೆದಿತ್ತು. ಇದರಲ್ಲಿ ಬೆಂಗಳೂರು ಜಯ ಸಾಧಿಸಿದೆ.
46 ಪಂದ್ಯಗಳು ಮುಕ್ತಾಯ
ಡೆಲ್ಲಿ ವಿರುದ್ಧ ಗೆದ್ದ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರಸ್ಥಾನಕ್ಕೇರಿದೆ. ಆಡಿದ 10 ಪಂದ್ಯಗಳಲ್ಲಿ 7 ಜಯ ಮೂರರಲ್ಲಿ ಸೋಲು ಕಂಡು 14 ಅಂಕ ಪಡೆದುಕೊಂಡಿದೆ.