IPL 2025 Points Table: ಸಿಎಸ್​ಕೆ ಬಹುತೇಕ ಟೂರ್ನಿಯಿಂದ ಔಟ್: ಒಂದು ಸ್ಥಾನ ಮೇಲೇರಿದ ಹೈದರಾಬಾದ್

26 April 2025                                    Author: Vinay Bhat

Pic credit - Google

ಶುಭ್​ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಇವರು ಆಡಿದ ಎಂಟು ಪಂದ್ಯಗಳ ಪೈಕಿ ಆರರಲ್ಲಿ ಜಯ ಸಾಧಿಸಿ ಎರಡರಲ್ಲಿ ಸೋತು 12 ಅಂಕ ಸಂಪಾದಿಸಿ ಪ್ಲೇ ಆಫ್​ಗೆ ಹತ್ತಿರವಾಗಿದೆ. +1.104 ರನ್​ರೇಟ್ ಹೊಂದಿದೆ.

ಗುಜರಾತ್ ಟೈಟಾನ್ಸ್

ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಎರಡನೇ ಸ್ಥಾನದಲ್ಲಿದೆ. ಆಡಿದ ಎಂಟು ಪಂದ್ಯಗಳಲ್ಲಿ ಎರಡು ಪಂದ್ಯದಲ್ಲಿ ಸೋಲು ಉಳಿದ 6 ರಲ್ಲಿ ಜಯ ಕಂಡು 12 ಅಂಕ ಸಂಪಾದಿಸಿದೆ. +0.657 ರನ್​ರೇಟ್ ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್

ಒಂದು ಸ್ಥಾನ ಕೆಳಕ್ಕೆ ಜಾರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ವಿರುದ್ಧ ಗೆದ್ದು ಮತ್ತೆ ಮೂರನೇ ಸ್ಥಾನಕ್ಕೇರಿದೆ. ಆಡಿದ 9 ಪಂದ್ಯಗಳಲ್ಲಿ 6 ಜಯ 3 ಸೋಲು ಕಂಡಿದೆ. +0.482 ರನ್​ ರೇಟ್ ಆಧಾರದ ಮೇಲೆ ಆರ್​ಸಿಬಿ 12 ಅಂಕ ಪಡೆದುಕೊಂಡಿದೆ.

ಆರ್​ಸಿಬಿ

ಸನ್​ರೈಸರ್ಸ್ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಆರನೇ ಸ್ಥಾನದಿಂದ ದಿಢೀರ್ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳಲ್ಲಿ ನಾಲ್ಕು ಸೋಲು ಹಾಗೂ ಐದು ಜಯ ಕಂಡು 10 ಅಂಕ ಪಡೆದುಕೊಂಡಿದ್ದು, +0.673 ರನ್​ರೇಟ್​ ಹೊಂದಿದೆ.

ಮುಂಬೈ ಇಂಡಿಯನ್ಸ್

ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಐದನೇ ಸ್ಥಾನಕ್ಕೆ ಕುಸಿದಿದೆ. ಈ ಋತುವಿನಲ್ಲಿ ಆಡಿದ 8 ಪಂದ್ಯಗಳಲ್ಲಿ ಐದರಲ್ಲಿ ಜಯ- ಮೂರರಲ್ಲಿ ಸೋಲು ಕಂಡು +0.177 ರನ್​ರೇಟ್​ನೊಂದಿಗೆ 10 ಅಂಕ ಪಡೆದುಕೊಂಡಿದೆ.

ಪಂಜಾಬ್ ಕಿಂಗ್ಸ್

ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರನೇ ಸ್ಥಾನಕ್ಕೆ ಕುಸಿದಿದೆ. ಆಡಿದ 9 ಪಂದ್ಯಗಳಲ್ಲಿ ಐದು ಗೆಲುವು ನಾಲ್ಕು ಸೋಲು ಕಾಣುವ ಮೂಲಕ -0.054 ರನ್ ರೇಟ್ ಹೊಂದಿದೆ.

ಲಕ್ನೋ ಸೂಪರ್ ಜೈಂಟ್ಸ್

ಅಜಿಂಕ್ಯಾ ರಹಾನೆ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 8 ಪಂದ್ಯಗಳಲ್ಲಿ ಮೂರು ಜಯ- ಐದರಲ್ಲಿ ಸೋಲು ಕಾಣುವ ಮೂಲಕ +0.212 ರನ್​ ರೇಟ್ ಹೊಂದಿದೆ.

ಕೆಕೆಆರ್

ಸಿಎಸ್​ಕೆ ವಿರುದ್ಧ ಗೆದ್ದ ಪರಿಣಾಮ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್​ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೇರಿದೆ. ಆಡಿದ 9 ಪಂದ್ಯದಲ್ಲಿ ಮೂರು ಗೆಲುವು- ಆರು ಸೋಲಿನ ಮೂಲಕ 6 ಅಂಕ ಸಂಪಾದಿಸಿದೆ. -1.103 ರನ್​ ರೇಟ್ ಹೊಂದಿದೆ.

ಸನ್​ರೈಸರ್ಸ್ ಹೈದರಾಬಾದ್

ರಾಜಸ್ಥಾನ್ ರಾಯಲ್ಸ್ ತಂಡ ಈ ಸೀಸನ್​ನಲ್ಲಿ ಕಳಪೆ ಪ್ರದರ್ಶನ ತೋರಿದೆ. ಆಡಿದ 9 ಪಂದ್ಯಗಳಲ್ಲಿ ಎರಡರಲ್ಲಿ ಜಯ- ಏಳರಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, -0.625 ರನ್​ ರೇಟ್ ಹೊಂದಿದೆ.

ರಾಜಸ್ಥಾನ್ ರಾಯಲ್ಸ್

ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ 9 ಪಂದ್ಯಗಳಲ್ಲಿ ಏಳು ಸೋಲು 2 ಗೆಲುವು ಮೂಲಕ 4 ಅಂಕ ಪಡೆದಿದೆ. ಈ ತಂಡ -1.302 ರನ್ ರೇಟ್​ನೊಂದಿಗೆ ಹತ್ತನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್