ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧ ಗೆದ್ದು ಅಗ್ರಸ್ಥಾನಕ್ಕೇರಿತ್ತು. ಈಗಲೂ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಆಡಿದ 11 ಪಂದ್ಯಗಳಲ್ಲಿ 8 ರಲ್ಲಿ ಜಯ 3 ಸೋಲು ಕಂಡಿದೆ. +0.482 ರನ್ ರೇಟ್ ಆಧಾರದ ಮೇಲೆ 16 ಅಂಕ ಪಡೆದು ಪ್ಲೇ ಆಫ್ಗೆ ಹತ್ತಿರವಾಗಿದೆ.
ಆರ್ಸಿಬಿ
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಲಕ್ನೋ ವಿರುದ್ಧ ಗೆದ್ದು ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ. ಆಡಿದ 11 ಪಂದ್ಯಗಳಲ್ಲಿ ಏಳರಲ್ಲಿ ಜಯ- ಮೂರರಲ್ಲಿ ಸೋಲು ಹಾಗೂ ಒಂದು ಪಂದ್ಯ ರದ್ದುಗೊಂಡು +0.376 ರನ್ರೇಟ್ನೊಂದಿಗೆ 15 ಅಂಕ ಪಡೆದುಕೊಂಡಿದೆ.
ಪಂಜಾಬ್ ಕಿಂಗ್ಸ್
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಒಂದು ಸ್ಥಾನ ಕೆಳಕ್ಕೆ ಇಳಿದಿದೆ. ಆಡಿದ 11 ಪಂದ್ಯಗಳಲ್ಲಿ ನಾಲ್ಕು ಸೋಲು ಹಾಗೂ ಏಳು ಜಯ ಕಂಡು 14 ಅಂಕ ಪಡೆದುಕೊಂಡಿದ್ದು, +1.274 ರನ್ರೇಟ್ ಹೊಂದಿದೆ.
ಮುಂಬೈ ಇಂಡಿಯನ್ಸ್
ನಾಲ್ಕನೇ ಸ್ಥಾನದಲ್ಲಿ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಇದೆ. ಇವರು ಆಡಿದ 10 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿ ಮೂರರಲ್ಲಿ ಸೋತು 14 ಅಂಕ ಸಂಪಾದಿಸಿದೆ. +0.867 ರನ್ರೇಟ್ ಹೊಂದಿದೆ.
ಗುಜರಾತ್ ಟೈಟಾನ್ಸ್
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ ನಾಲ್ಕು ಪಂದ್ಯದಲ್ಲಿ ಸೋಲು ಉಳಿದ 6 ರಲ್ಲಿ ಜಯ ಹಾಗೂ ಒಂದು ರದ್ದು ಕಂಡು 13 ಅಂಕ ಸಂಪಾದಿಸಿದೆ. +0.362 ರನ್ರೇಟ್ ಹೊಂದಿದೆ.
ಡೆಲ್ಲಿ ಕ್ಯಾಪಿಟಲ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರನೇ ಸ್ಥಾನಕ್ಕೆ ಏರಿದೆ. ಆಡಿರುವ 11 ಪಂದ್ಯಗಳಲ್ಲಿ ಐದರಲ್ಲಿ ಜಯ- ಐದರಲ್ಲಿ ಸೋಲು ಕಾಣುವ ಮೂಲಕ +0.249 ರನ್ ರೇಟ್ ಹೊಂದಿದೆ.
ಕೆಕೆಆರ್
ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಪಂಜಾಬ್ ವಿರುದ್ಧ ಸೋತು ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿದ 11 ಪಂದ್ಯಗಳಲ್ಲಿ ಐದು ಗೆಲುವು 6 ಸೋಲು ಕಾಣುವ ಮೂಲಕ -0.469 ರನ್ರೇಟ್ ಹೊಂದಿದೆ.
ಲಕ್ನೋ ಸೂಪರ್ ಜೈಂಟ್ಸ್
ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ 12 ಪಂದ್ಯಗಳಲ್ಲಿ ಮೂರರಲ್ಲಿ ಜಯ- ಒಂಬತ್ತರಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಎಂಟನೇ ಸ್ಥಾನದಲ್ಲಿದ್ದು, -0.718 ರನ್ ರೇಟ್ ಹೊಂದಿದೆ.
ರಾಜಸ್ಥಾನ್ ರಾಯಲ್ಸ್
ಸನ್ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದ್ದು ಟೂರ್ನಿಯಿಂದ ಔಟ್ ಆಗಿದೆ. ಆಡಿದ 11 ಪಂದ್ಯದಲ್ಲಿ ಮೂರು ಗೆಲುವು- ಏಳು ಸೋಲು ಹಾಗೂ ಒಂದು ಪಂದ್ಯ ರದ್ದಾದ ಪರಿಣಾಮ 7 ಅಂಕ ಸಂಪಾದಿಸಿದೆ. -1.192 ರನ್ ರೇಟ್ ಹೊಂದಿದೆ.
ಸನ್ರೈಸರ್ಸ್ ಹೈದರಾಬಾದ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ 11 ಪಂದ್ಯಗಳಲ್ಲಿ ಒಂಬತ್ತು ಸೋಲು 2 ಗೆಲುವು ಮೂಲಕ 4 ಅಂಕ ಪಡೆದಿದೆ. ಈ ತಂಡ -1.117 ರನ್ ರೇಟ್ನೊಂದಿಗೆ ಹತ್ತನೇ ಸ್ಥಾನದಲ್ಲಿದೆ.