ಅಹಮದಾಬಾದ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿದ್ದಾರೆ.
ಕೆಎಲ್ ರಾಹುಲ್ ಶತಕ
Pic credit - BCCI
ತಮ್ಮ ಟೆಸ್ಟ್ ವೃತ್ತಿಜೀವನದ 11ನೇ ಶತಕ ಬಾರಿಸಿರುವ ರಾಹುಲ್, ಈ ಮೂಲಕ ಕೋಚ್ ಗಂಭೀರ್ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
11ನೇ ಟೆಸ್ಟ್ ಶತಕ
Pic credit - BCCI
‘ಟೆಸ್ಟ್ ಪಂದ್ಯದ ಎರಡನೇ ದಿನದಂದು ಶತಕ ಬಾರಿಸಿದ ಕೆಎಲ್ ರಾಹುಲ್ ಸುಮಾರು ಒಂಬತ್ತು ವರ್ಷಗಳ ನಂತರ ತವರು ನೆಲದಲ್ಲಿ ಟೆಸ್ಟ್ ಶತಕದ ಬರ ನೀಗಿಸಿಕೊಂಡರು.
ಒಂಬತ್ತು ವರ್ಷಗಳ ನಂತರ
Pic credit - BCCI
ಇದು ಭಾರತದ ನೆಲದಲ್ಲಿ ರಾಹುಲ್ ಎರಡನೇ ಟೆಸ್ಟ್ ಶತಕವಾಗಿದ್ದು, ತಮ್ಮ ಇನ್ನಿಂಗ್ಸ್ನಲ್ಲಿ 197 ಎಸೆತಗಳನ್ನು ಎದುರಿಸಿದ ರಾಹುಲ್ 12 ಬೌಂಡರಿಗಳನ್ನು ಒಳಗೊಂಡಂತೆ 100 ರನ್ ಗಳಿಸಿ ಔಟಾದರು.
197 ಎಸೆತಗಳಲ್ಲಿ 100 ರನ್
Pic credit - BCCI
ಇದರೊಂದಿಗೆ ರಾಹುಲ್ ಆರಂಭಿಕನಾಗಿ ಟೆಸ್ಟ್ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಗೌತಮ್ ಗಂಭೀರ್ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ದಿಗ್ಗಜರ ದಾಖಲೆ ಧ್ವಂಸ
Pic credit - BCCI
ಇದು ಆರಂಭಿಕ ಆಟಗಾರನಾಗಿ ರಾಹುಲ್ ಅವರ 10 ನೇ ಟೆಸ್ಟ್ ಶತಕವಾಗಿದ್ದು, ಭಾರತ ಪರ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಾಲ್ಕನೇ ಬ್ಯಾಟ್ಸ್‌ಮನ್
Pic credit - BCCI
ಪ್ರಸ್ತುತ, ಸುನಿಲ್ ಗವಾಸ್ಕರ್ (33 ಶತಕಗಳು), ವೀರೇಂದ್ರ ಸೆಹ್ವಾಗ್ (22 ಶತಕಗಳು) ಮತ್ತು ಮುರಳಿ ವಿಜಯ್ (12 ಶತಕಗಳು) ಈ ವಿಷಯದಲ್ಲಿ ರಾಹುಲ್‌ಗಿಂತ ಮುಂದಿದ್ದಾರೆ.
ಅಗ್ರಸ್ಥಾನದಲ್ಲಿ ಗವಾಸ್ಕರ್
Pic credit - BCCI
ಆರಂಭಿಕರಾಗಿ ಭಾರತ ಪರ ತಲಾ ಒಂಬತ್ತು ಟೆಸ್ಟ್ ಶತಕಗಳನ್ನು ಗಳಿಸಿರುವ ಗಂಭೀರ್ ಮತ್ತು ರೋಹಿತ್ ಅವರನ್ನು ರಾಹುಲ್ ಹಿಂದಿಕ್ಕಿದರು.