Pakistan, Asia Cup: ಏಷ್ಯಾಕಪ್ನಿಂದ ಪಾಕಿಸ್ತಾನ ಹಿಂದೆ ಸರಿದರೆ ಏನಾಗುತ್ತದೆ?
17 Sep 2025
ಹ್ಯಾಂಡ್ ಶೇಖ್ ವಿವಾದ
ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ 2025 ಪಂದ್ಯದ ನಂತರ ಟೀಮ್ ಇಂಡಿಯಾ ಆಟಗಾರರು ಕೈಕುಲುಕದಿರುವುದು ಈಗ ಪ್ರಮುಖ ಸಮಸ್ಯೆಯಾಗಿದೆ.
ಭಾರತದಿಂದ ನಿರ್ಲಕ್ಷ್ಯ
ಪಾಕಿಸ್ತಾನ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ನಂತರ ಸೂರ್ಯಕುಮಾರ್ ಯಾದವ್ ಮತ್ತು ಸಹ ಆಟಗಾರರು ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ನಲ್ಲಿ ಭಾಗವಹಿಸಲು ನಿರಾಕರಿಸಿದರು.
ಪೈಕ್ರಾಫ್ಟ್ ಅಮಾನತು?
ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನಾಯಕ ಸಲ್ಮಾನ್ ಅಘಾ ಅವರಿಗೆ ಹಸ್ತಲಾಘವ ಮಾಡದಂತೆ ತಿಳಿಸಿದ್ದಕ್ಕಾಗಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಅಮಾನತುಗೊಳಿಸುವಂತೆ ಐಸಿಸಿಯನ್ನು ಒತ್ತಾಯಿಸಿತು.
ಪಾಕ್ ಬೆದರಿಕೆ
ಯಎಇ ವಿರುದ್ಧದ ಮುಂಬರುವ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಮಂಡಳಿ ಬೆದರಿಕೆ ಹಾಕಿದೆ. ಪಾಕಿಸ್ತಾನ ಯುಎಇ ಪಂದ್ಯದಿಂದ ಹಿಂದೆ ಸರಿದರೆ ಏನಾಗಬಹುದು?.
ನಿರ್ಣಾಯಕ ಪಂದ್ಯ
ಪಾಕ್ಪಾಕಿಸ್ತಾನ ಮತ್ತು ಯುಎಇ ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಸೋತಿದ್ದು, ಉಳಿದ ಒಂದು ಪಂದ್ಯ ಎರಡೂ ತಂಡಕ್ಕೆ ನಿರ್ಣಾಯಕವಾಗಿದೆ.
ಯುಎಇ ಸೂಪರ್-4ಗೆ
ಪಾಕಿಸ್ತಾನ ತನ್ನ ಮೂರನೇ ಮತ್ತು ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲು ನಿರಾಕರಿಸಿದರೆ, ಯುಎಇ ಎರಡು ಅಂಕಗಳನ್ನು ಗಳಿಸುತ್ತದೆ ಮತ್ತು ಸೂಪರ್ ಫೋರ್‌ಗೆ ಅರ್ಹತೆ ಪಡೆಯುತ್ತದೆ.
ದುಬೈನಲ್ಲಿ ಪಂದ್ಯ
ಪಾಕಿಸ್ತಾನ-ಯುಎಇ ಪಂದ್ಯ ಇಂದು ದುಬೈ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಾಕಿಸ್ತಾನ ಈ ಪಂದ್ಯವನ್ನು ಆಡುತ್ತದೆಯೇ-ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಭಾರತ ಸೂಪರ್-4ಗೆ
ಗ್ರೂಪ್ ಎ ನಲ್ಲಿ, ಭಾರತ ಸೂಪರ್ ಫೋರ್ ತಲುಪಿದ ಮೊದಲ ತಂಡವಾಗಿದೆ. ಆಡಿದ ಎರಡೂ ಪಂದ್ಯ ಗೆದ್ದಿದೆ. ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಓಮನ್.