ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್ಗೆ ಕೊಂಡೊಯ್ಯದ ನಾಯಕ ರಜತ್ ಪಾಟಿದಾರ್ಗೆ ಇಂದು ಹುಟ್ಟುಹಬ್ಬ ಸಂಭ್ರಮ. ಅಂದರೆ ಜೂನ್ 1 ರಂದು ಪಾಟಿದಾರ್ 32 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ರಜತ್ ಪಾಟಿದಾರ್ ಇಂದೋರ್ ನಿವಾಸಿ. ಅವರು ಜೂನ್ 1, 1993 ರಂದು ಇಂದೋರ್‌ನಲ್ಲಿ ಜನಿಸಿದರು. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು.
ರಜತ್ ಅವರ ಅಜ್ಜ ಇವರನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರಂತೆ. ಆರಂಭದಲ್ಲಿ ಇವರು ಒಬ್ಬ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂಬುದು ಅನೇಕರಿಗೆ ತಿಳಿದಿಲ್ಲ.
ಕೋಚ್ ಸಲಹೆಯ ಮೇರೆಗೆ ರಜತ್ ಪಾಟಿದಾರ್ ಬ್ಯಾಟಿಂಗ್ ಅಭ್ಯಾಸ ಶುರುಮಾಡಿ ಅದರಲ್ಲಿ ಯಶಸ್ಸು ಕಂಡರು. ಅಂಡರ್-15 ತಂಡದಲ್ಲಿ ರಜತ್ ಪ್ರಮುಖ ಬ್ಯಾಟ್ಸ್‌ಮನ್ ಆದರು.
ರಜತ್ ಅವರ ನೆಚ್ಚಿನ ಆಟಗಾರ ಸಚಿನ್ ತೆಂಡೂಲ್ಕರ್ ಅಂತೆ. ಅವನನ್ನು ನೋಡಿ ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದೆ ಎಂದು ರಜತ್ ಈ ಹಿಂದೆ ಹೇಳಿದ್ದರು.
ರಜತ್ ಪಾಟಿದಾರ್ 2015-16ರಲ್ಲಿ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 2018-19ರ ಋತುವಿನಲ್ಲಿ, ರಜತ್ ಪಾಟಿದಾರ್ ಎಂಪಿ ಪರ ರಣಜಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ಆಗಸ್ಟ್ 2019 ರಲ್ಲಿ, ಅವರನ್ನು ದುಲೀಪ್ ಟ್ರೋಫಿಗಾಗಿ ಇಂಡಿಯಾ ಬ್ಲೂ ತಂಡದಲ್ಲಿ ಸೇರಿಸಲಾಯಿತು. ಇದಾದ ನಂತರ, ರಜತ್ ಪಟಿದಾರ್ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ.
ಫೆಬ್ರವರಿ 2021 ರಲ್ಲಿ, ರಜತ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿತು. ಏಪ್ರಿಲ್ 9, 2021 ರಂದು, ರಜತ್ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು.
ಅಂದಹಾಗೆ ರಜತ್ ಅವರ ಪೂರ್ಣ ಹೆಸರು ರಜತ್ ಮನೋಹರ್ ಪಾಟಿದಾರ್. ತಂದೆಯ ಹೆಸರು ಮನೋಹರ್ ಪಾಟಿದಾರ್. ದೇವಾಸ್‌ನ ಗುರು ವಶಿಷ್ಠ ಕಾಲೇಜಿನಲ್ಲಿ ಪದವಿ ಪಡೆದ ಇವರಿಗೆ ಫುಟ್ಬಾಲ್ ಕೂಡ ಇಷ್ಟವಂತೆ.