RCB: ಐಪಿಎಲ್ ಸ್ಥಗಿತದಿಂದ ಆರ್‌ಸಿಬಿಗೆ ಬಹುದೊಡ್ಡ ಲಾಭ: ಏನದು ನೋಡಿ
12 May 2025 Author: Vinay Bhat
Pic credit - Google
ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ಮೇ 9 ರಂದು ಬಿಸಿಸಿಐ ಐಪಿಎಲ್ 2025 ಅನ್ನು ಒಂದು ವಾರ ಸ್ಥಗಿತಗೊಳಿಸಿತು. ಈ ನಿರ್ಧಾರದಿಂದ ಆರ್‌ಸಿಬಿ ತಂಡಕ್ಕೆ ಹೆಚ್ಚಿನ ಲಾಭವಾಯಿತು.
ಆರ್‌ಸಿಬಿ ತಂಡಕ್ಕೆ ಲಾಭ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಗದಿತ ಸಮಯದಲ್ಲಿ ಪಂದ್ಯಗಳು ನಡೆದಿದ್ದರೆ, ಅವರು ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಬೇಕಾಗಿತ್ತು.
ಗಾಯದಿಂದ ಬಳಲುತ್ತಿರುವ ಕ್ಯಾಪ್ಟನ್
ವರದಿಗಳ ಪ್ರಕಾರ, ಐಪಿಎಲ್ 2025 ಅನ್ನು ಅಮಾನತುಗೊಳಿಸದಿದ್ದರೆ ಅವರು ಕನಿಷ್ಠ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಬೇಕಿತ್ತು. ಆದರೆ ಈ ನಿರ್ಧಾರದ ನಂತರ, ಅವರು ಯಾವುದೇ ಪಂದ್ಯವನ್ನು ತಪ್ಪಿಸಿಕೊಳ್ಳದೆ ಕನಿಷ್ಠ ಒಂದು ವಾರದ ಸಮಯವನ್ನು ಪಡೆದಿದ್ದಾರೆ.
ಚೇತರಿಕೆಗೆ ಅವಕಾಶ
ಮೇ 3 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ರಜತ್ ಪಟಿದಾರ್ ಗಾಯಗೊಂಡಿದ್ದರು. ಅವರು ಫೀಲ್ಡಿಂಗ್ ಮಾಡುವಾಗ ಇಂಜುರಿಗೆ ತುತ್ತಾದರು.
ಸಿಎಸ್‌ಕೆ ವಿರುದ್ಧ ಗಾಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 9 ರಂದು ಪಂದ್ಯವನ್ನು ಆಡಬೇಕಿತ್ತು. ಈ ಪಂದ್ಯ ನಡೆದಿದ್ದರೆ, ಜಿತೇಶ್ ಶರ್ಮಾ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿಯನ್ನು ಮುನ್ನಡೆಸಬೇಕಾಗಿತ್ತು.
ಮೇ 9 ರಂದು ನಡೆಯಬೇಕಿತ್ತು ಪಂದ್ಯ
ಈ ಸೀಸನ್ ಇಲ್ಲಿಯವರೆಗೆ ರಜತ್ ಪಟಿದಾರ್ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು 11 ಪಂದ್ಯಗಳಲ್ಲಿ 23.90 ಸರಾಸರಿಯಲ್ಲಿ 239 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು ನಾಯಕನಾಗಿಯೂ ಸಾಕಷ್ಟು ಯಶಸ್ವಿಯಾಗಿದ್ದಾರೆ.
ರಜತ್ ಪಟಿದಾರ್ ಪ್ರದರ್ಶನ
ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ 11 ಪಂದ್ಯಗಳನ್ನು ಆಡಿದ್ದು, 8 ಪಂದ್ಯಗಳಲ್ಲಿ ಜಯಗಳಿಸಿದೆ. ಅವರು ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.