ಸ್ಮೃತಿ ಮಂಧಾನ ಅಭಿಮಾನಿಗಳಿಗೆ ಸಿಕ್ಕಿತು ಬಂಪರ್ ಸುದ್ದಿ: ಏನದು ನೋಡಿ
14 May 2025 Author: Vinay Bhat
Pic credit - Google
ಐಸಿಸಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಸ್ಮೃತಿ ಮಂಧಾನಾ ಅವರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಮಂಧಾನಾ ಏಕದಿನ ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದಾರೆ.
ಮಂಧಾನಗೆ ಬಂಪರ್ ಸುದ್ದಿ
ಮಂಧಾನ ಅವರ ಏಕದಿನ ಶ್ರೇಯಾಂಕ ಈಗ 2ನೇ ಸ್ಥಾನಕ್ಕೆ ಏರಿದೆ. ಇದಕ್ಕೂ ಮೊದಲು ಅವರು ಮೂರನೇ ಸ್ಥಾನದಲ್ಲಿದ್ದರು.
ಇದು ಮಂಧಾನ ಶ್ರೇಯಾಂಕ
ಮಂಧಾನಾ ಅವರು ನಾಟ್ ಸಿವರ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ 725 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ನಾಟ್ ಸಿವರ್ ಹಿಂದಿಕ್ಕಿ ಸಾಧನೆ
ಮಂಧಾನ ಈಗ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಲಾರಾ ವೂಲ್‌ಫಾಟ್ ಗಿಂತ ಕೇವಲ ಒಂದು ಸ್ಥಾನ ಹಿಂದಿದ್ದಾರೆ. ಮಂಧಾನ ಮತ್ತು ವೂಲ್‌ಫಾರ್ಟ್ ನಡುವೆ 11 ರೇಟಿಂಗ್ ಪಾಯಿಂಟ್‌ಗಳ ವ್ಯತ್ಯಾಸವಿದೆ.
ಲಾರಾ ವೂಲ್‌ಫಾರ್ಟ್‌ಗೆ ಅಪಾಯ
2019 ರಲ್ಲಿ ಕೊನೆಯ ಬಾರಿಗೆ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಮಂಧಾನ, ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು.
2019 ರಲ್ಲಿ ನಂಬರ್ ಒನ್ ಸ್ಥಾನ
ಸ್ಮೃತಿ ಮಂಧಾನ ಇತ್ತೀಚೆಗೆ ತ್ರಿಕೋನ ಸರಣಿಯಲ್ಲಿ 264 ರನ್ ಗಳಿಸಿದ್ದರು, ಇದರಲ್ಲಿ ಅವರು ಅಂತಿಮ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದರು.
ಭರ್ಜರಿ ಫಾರ್ಮ್ನಲ್ಲಿ ಮಂಧಾನ
ಸ್ಮೃತಿ ಮಂಧಾನ ಅವರ ಅದ್ಭುತ ಶತಕದ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾವನ್ನು ಸೋಲಿಸಿ ತ್ರಿಕೋನ ಸರಣಿಯನ್ನು ಗೆದ್ದುಕೊಂಡಿತು.
ಸರಣಿ ಗೆದ್ದ ಭಾರತ
ಬೌಲಿಂಗ್‌ನಲ್ಲಿ, ಆಫ್-ಸ್ಪಿನ್ನರ್ ದೀಪ್ತಿ ಶರ್ಮಾ ಅಗ್ರ 10 ರಲ್ಲಿರುವ ಏಕೈಕ ಭಾರತೀಯ. ಅವರ ODI ಶ್ರೇಯಾಂಕ 4. ದೀಪ್ತಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ.