Virat Kohli: ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗೆ ಎಷ್ಟು ಸಂಬಳ ಸಿಗುತ್ತಿತ್ತು?
13 May 2025 Author: Vinay Bhat
Pic credit - Google
ಭಾರತೀಯ ಕ್ರಿಕೆಟ್ ತಂಡದ ಟೆಸ್ಟ್ ಸ್ವರೂಪದಲ್ಲಿ 14 ವರ್ಷಗಳ ಕಾಲ ಆಡಿ ವಿರಾಟ್ ಕೊಹ್ಲಿ ನಿವೃತ್ತಿ ನೀಡಿರುವುದು ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳನ್ನು ಆಘಾತಗೊಳಿಸಿದೆ.
14 ವರ್ಷಗಳ ವೃತ್ತಿಜೀವನ
ವಿರಾಟ್ ಕೊಹ್ಲಿ 2011 ರಲ್ಲಿ ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಅವರು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು.
2011 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ
ಈಗ ಎಲ್ಲರಲ್ಲಿ ಮೂಡುತ್ತಿರುವ ಪ್ರಶ್ನೆ ಏನೆಂದರೆ, ಟೆಸ್ಟ್ ಕ್ರಿಕೆಟ್ ಆಡಲು ವಿರಾಟ್ ಕೊಹ್ಲಿ ಎಷ್ಟು ಸಂಬಳ ಪಡೆಯುತ್ತಿದ್ದರು ಎಂಬುದು.
ಟೆಸ್ಟ್‌ನಲ್ಲಿ ವಿರಾಟ್‌ಗೆ ಎಷ್ಟು ಸಂಭಾವನೆ?
ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಪಂದ್ಯಗಳನ್ನು ಆಡಲು ಭಾರತೀಯ ಆಟಗಾರರಿಗೆ ಶುಲ್ಕವನ್ನು ಬಿಸಿಸಿಐ ನಿರ್ಧರಿಸುತ್ತದೆ. ವಿರಾಟ್ ಕೂಡ ಟೆಸ್ಟ್‌ಗಳಲ್ಲಿ ಅದಕ್ಕೆ ತಕ್ಕಂತೆ ಸಂಭಾವನೆ ಪಡೆಯುತ್ತಿದ್ದರು.
ಪ್ರತಿಯೊಂದು ಸ್ವರೂಪದಲ್ಲಿ ವಿಭಿನ್ನ ಶುಲ್ಕ
ಭಾರತ ಪರ ಪ್ರತಿ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ವಿರಾಟ್ ಕೊಹ್ಲಿಗೆ 15 ಲಕ್ಷ ರೂ. ನೀಡಲಾಗುತ್ತಿತ್ತು. ಇದರಲ್ಲಿ ಮಾಸಿಕ ಸಂಬಳ ಎಂಬುದು ಇಲ್ಲ.
15 ಲಕ್ಷ ರೂಪಾಯಿ
ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 210 ಇನ್ನಿಂಗ್ಸ್‌ಗಳಲ್ಲಿ 9230 ರನ್ ಗಳಿಸಿದ್ದಾರೆ.
123 ಟೆಸ್ಟ್, 9230 ರನ್
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳನ್ನು ಗಳಿಸಿದ್ದಾರೆ, ಅವರ ಬ್ಯಾಟಿಂಗ್ ಸರಾಸರಿ 46.85 ಆಗಿದೆ.
30 ಶತಕಗಳು, 31 ಅರ್ಧಶತಕಗಳು
ಭಾರತ ತಂಡ ಜೂನ್‌ನಲ್ಲಿ ಇಂಗ್ಲೆಂಡ್‌ಗೆ 5 ಟೆಸ್ಟ್ ಪಂದ್ಯಗಳ ಸರಣಿಗಾಗಿ ಹೋಗಬೇಕಾಗಿದೆ. ಆದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದು ಎಲ್ಲರನ್ನೂ ಆಘಾತಗೊಳಿಸಿದೆ.