ಅಫ್ಘಾನಿಸ್ತಾನದ ಈ ಸುಂದರಿ ಟೀಮ್ ಇಂಡಿಯಾದ ಕಟ್ಟಾ ಅಭಿಮಾನಿ

14 September 2025

Pic credit - instagram

Author: Preethi Bhat

ಏಷ್ಯಾಕಪ್ 2024 ಟೂರ್ನಿ ರೋಚಕತೆ ಸೃಷ್ಟಿಸುತ್ತಿದೆ. ಭಾರತ ಇಂದು ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ ಆಡಲಿದೆ. ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ಈ ಸುಂದರಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನದ ಸುಂದರಿ

ಇವರ ಹೆಸರು ವಾಜ್ಮಾ ಅಯೂಬಿ. ಇವರು ಅಫ್ಘಾನಿಸ್ತಾದವರಾಗಿದ್ದರೂ ಭಾರತದ ಹೆಚ್ಚಿನ ಪಂದ್ಯಕ್ಕೆ ಹಾಜರಿರುತ್ತಾರೆ. ವಾಜ್ಮಾ ಉದ್ಯಮಿ, ರೂಪದರ್ಶಿ ಮತ್ತು ಕ್ರಿಕೆಟ್ ಅಭಿಮಾನಿ.

ವಾಜ್ಮಾ ಅಯೂಬಿ

ಅಫ್ಘಾನಿಸ್ತಾನ ಬಿಟ್ಟರೆ ಇವರ ನೆಚ್ಚಿನ ತಂಡ ಅದು ಟೀಮ್ ಇಂಡಿಯಾ ಎಂದು ಸ್ವತಃ ಅವರೇ ಹೇಳಿದ್ದಾರೆ. ವಜ್ಮಾ ಭಾರತವನ್ನು ತನ್ನ ಎರಡನೇ ಮನೆ ಎಂದು ಹೇಳಿಕೊಂಡಿದ್ದಾರೆ.

ಭಾರತ ಎರಡನೇ ಮನೆ

ಭಾರತದ ಜೆರ್ಸಿಯಲ್ಲಿ ವಜ್ಮಾ ತೆಗೆದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದೆ. ಏಷ್ಯಾಕಪ್ 2023 ರಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದರು.

ಫೋಟೋ ವೈರಲ್

2023 ಏಷ್ಯಾಕಪ್​ನಲ್ಲಿ ಭಾರತ-ಪಾಕ್ ಪಂದ್ಯ ಇರುವಾಗ ಇವರು ಕಾಣಿಸಿಕೊಂಡಿದ್ದರು. ವಾಜ್ಮಾ ಪ್ರಸ್ತುತ ದುಬೈನಲ್ಲಿ ನೆಲೆಸಿದ್ದು ಯುಎಇ ಮೂಲದ ಮಾಡೆಲ್ ಆಗಿದ್ದಾರೆ.

ಭಾರತ-ಪಾಕ್ ಪಂದ್ಯ

ವಾಜ್ಮಾ ಉದ್ಯಮಿಯಾಗಿದ್ದು ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 5 ಲಕ್ಷ + ಆಗಿದೆ. ಇವರು ಭಾರತದ ಮೇಲಿನ ಪ್ರೀತಿಯನ್ನು ತೋರ್ಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಐಪಿಎಲ್‌ನಲ್ಲೂ ಕಾಣಿಸಿಕೊಂಡಿದ್ದರು.

ಉದ್ಯಮಿಯೂ ಆಗಿದ್ದಾರೆ

ವಾಜ್ಮಾ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಕೂಡ ಇದೆಯಂತೆ. ಬಾಲಿವುಡ್‌ನಲ್ಲಿ ಕೆಲಸ ಮಾಡುವ ಕುರಿತು ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಆಸಕ್ತಿ

ವಾಜ್ಮಾ ಅಯುಬಿ ೧೯೯೫ ರಲ್ಲಿ ಅಫ್ಘಾನಿಸ್ತಾನದ ಕುಂದುಜ್‌ನಲ್ಲಿ ಜನಿಸಿದರು. ಆದಾಗ್ಯೂ, ಅವರು ಜನಿಸಿದ ಕೆಲವು ವರ್ಷಗಳ ನಂತರ, ಅವರ ಕುಟುಂಬ ದುಬೈಗೆ ಸ್ಥಳಾಂತರಗೊಂಡಿತು.

ಕುಂದುಜ್‌ನಲ್ಲಿ ಜನನ