Pic credit - Instagram

Author: Rajesh Duggumane

‘ಬ್ರಹ್ಮ ಕಮಲ’ ಟೀಸರ್ ಮೂಲಕ ಗಮನ ಸೆಳೆದ ನಟಿ ಅದ್ವಿತಿ ಶೆಟ್ಟಿ 

04 August 2026

ಚಿತ್ರದ ಟ್ರೇಲರ್

ಅದ್ವಿತಿ ಶೆಟ್ಟಿ ನಟನೆಯ 'ಬ್ರಹ್ಮ ಕಮಲ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಭಿನ್ನ ಕಥಾಹಂದರ

'ದಾರಿ ಯಾವುದಯ್ಯ ವೈಕುಂಠಕೆ' ಖ್ಯಾತಿಯ ಸಿದ್ದು ಪೂರ್ಣಚಂದ್ರ ಈ ಚಿತ್ರಕ್ಕೆ ಅತ್ಯಂತ ಸೂಕ್ಷ್ಮವಾಗಿ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಹೆಣ್ಣಿನ ತಳಮಳ

ಕೌಟುಂಬಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಒತ್ತಡಕ್ಕೆ ಸಿಲುಕುವ ಹೆಣ್ಣಿನ ನೋವು ಹಾಗೂ ತಳಮಳವನ್ನು ಈ ಕಥೆ ಅನಾವರಣಗೊಳಿಸುತ್ತದೆ.

ವಿಶೇಷ ಮೆಚ್ಚುಗೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು, ಪ್ರೇಕ್ಷಕರ ಭರಪೂರ ಮೆಚ್ಚುಗೆಗೆ ಈ ಸಿನಿಮಾ ಭಾಜನವಾಗಿದೆ.

ಚಿತ್ರತಂಡದ ಶ್ರಮ

'ಪೂರ್ಣ ಚಂದ್ರ ಫಿಲ್ಮ್ಸ್' ಬ್ಯಾನರ್‌ನಡಿ ನಿರ್ಮಾಣವಾಗಿರುವ ಚಿತ್ರ ಶೀಘ್ರದಲ್ಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ತಾರಾಗಣದ ಬಲ

ಅದ್ವಿತಿ ಶೆಟ್ಟಿ, ಋತು ಚೈತ್ರಾ ಮತ್ತು ಲೋಕೇಂದ್ರ ಸೂರ್ಯ ಮುಂತಾದ ಪ್ರಮುಖ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ತಾಂತ್ರಿಕ ಶ್ರೀಮಂತಿಕೆ

ಲೋಕೇಂದ್ರ ಸೂರ್ಯ ಛಾಯಾಗ್ರಹಣ ಹಾಗೂ ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.