Pic credit - Instagram

Author: Rajesh Duggumane

ಕನ್ನಡಕ್ಕೆ ಮರಳಿದ ಸುಂದರಿ ಪ್ರಿಯಾಂಕಾ ಮೋಹನ್ 

03 July 2026

ಸಿನಿಮಾ ಪ್ರವೇಶ

'ಒಂದ್ ಕಥೆ ಹೇಳ್ಲಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ  ನಟಿ ಪ್ರಿಯಾಂಕಾ ಮೋಹನ್  ಎಲ್ಲರ ಗಮನ ಸೆಳೆದರು. 

ಪರಭಾಷಾ ಜರ್ನಿ

ಕನ್ನಡದ ನಂತರ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಾ ಅಲ್ಲಿನ ಸ್ಟಾರ್ ನಟಿಯಾಗಿ ಪ್ರಿಯಾಂಕಾ ಗುರುತಿಸಿಕೊಂಡರು.  

ಅದ್ಭುತ ಯಶಸ್ಸು:

ಅನ್ಯಭಾಷೆಗಳಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ತಮ್ಮ ನಟನಾ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದರು. 

ಮರಳಿ ಆಗಮನ

ಪ್ರಸ್ತುತ ಬಹಳ ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಪ್ರಿಯಾಂಕಾ ಮೋಹನ್ ಅವರು ಭರ್ಜರಿಯಾಗಿ ಮರಳಿದ್ದಾರೆ.

ಮಲ್ಟಿಸ್ಟಾರರ್ ಸಿನಿಮಾ

ಶಿವರಾಜ್‌ಕುಮಾರ್ ಮತ್ತು ಧನಂಜಯ್ ನಟನೆಯ ಬಹುನಿರೀಕ್ಷಿತ '666 ಆಪರೇಷನ್ ಡ್ರೀಮ್' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 

ಶೀಘ್ರವೇ ಬಿಡುಗಡೆ 

ಈಗಾಗಲೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಈ ವಿಶಿಷ್ಟ ಸಿನಿಮಾ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. 

ಹೊಸ ಆಶಯ

ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡಿರುವ ಈ ನಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಲಿ ಎನ್ನುವುದೇ ಅಭಿಮಾನಿಗಳ ಆಶಯ.